ವೀರಾಜಪೇಟೆ, ಮೇ 8: ಕಣ್ಣಂಗಾಲದ ಒಕ್ಕಲಿಗರ ಸಂಘದಿಂದ ತಾ:12ರಂದು ಯುಗಾದಿ ಹಬ್ಬದ ಪ್ರಯುಕ್ತ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ ಎಂದು ಸಂಘದ ನಿರ್ದೇಶಕ ಕೆ.ಪಿ.ನಾಗರಾಜು ತಿಳಿಸಿದ್ದಾರೆ.

ಅಮ್ಮತ್ತಿ ಒಂಟಿಯಂಗಡಿಯ ಶಾಲಾ ಮೈದಾನದಲ್ಲಿ ಬೆಳಿಗ್ಗೆ 10ಗಂಟೆಗೆ ಸಂಘದ ಅಧ್ಯಕ್ಷ ವಿ.ಕೆ.ದೇವಲಿಂಗಯ್ಯ ಅಧ್ಯಕ್ಷತೆಯನ್ನು ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ. ಸಂಘದ ಸದಸ್ಯರು ಹಾಗೂ ಮಕ್ಕಳಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅವಕಾಶವಿದ್ದು, ಪುರುಷರಿಗೆ 7 ಜನರ ತಂಡದ ಹಗ್ಗ ಜಗ್ಗಾಟ, 100ಮೀಟರ್ ಓಟದ ಸ್ಫರ್ಧೆ, ಗೋಣಿಚೀಲ ಜಿಗಿತದ ಸ್ಪರ್ಧೆ, ಮಹಿಳೆಯರಿಗೆ ಹಗ್ಗಜಗ್ಗಾಟ, ಸಂಗೀತ ಕುರ್ಚಿ ಹಾಗೂ ಊರಿನಿಂದ ಮದುವೆಯಾದ ಹೆಣ್ಣು ಮಕ್ಕಳಿಗೆ ವಿಷದ ಚೆಂಡು, 18 ವರ್ಷ ಹಾಗೂ 12ವರ್ಷದ ಬಾಲಕ ಬಾಲಕಿಯರಿಗೆ 100 ಮೀಟರ್ ಓಟದ ಸ್ಪರ್ಧೆ, 5ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.