ಶ್ರೀಮಂಗಲ, ಮೇ 7: ಕೊಡವ ತಕ್ಕ್ ಎಳ್ತ್ ಕಾರಡ ಕೂಟ, ಮೈಸೂರು ಕೊಡವ ಸಮಾಜ, ಲೋಪಮುದ್ರೆ ಕೊಡವ ಸಂಘ ಮೈಸೂರು ಈ ಮೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡವ ತಕ್ಕ್ ಎಳ್ತ್ ಕಾರಡ ಕೂಟದ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಯಾಯಿತು. ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಲ್ಯಮಂಡ ನಾಣಯ್ಯ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಕೆ ಬೆಳವಣಿಗೆಗಾಗಿ 25 ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹಾಗೂ 170ಕ್ಕೂ ಹೆಚ್ಚು ಕೊಡವ ಭಾಷಾ ಪುಸ್ತಕಗಳನ್ನು ಪ್ರಕಟಿಸಿದ ಎಳ್ತ್‍ಕಾರಡ ಕೂಟದ ಸಾಧನೆ ಶ್ಲಾಘನೀಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ 1994 ಎಪ್ರಿಲ್ 30ರಂದು ಹುಟ್ಟಿದ ಕೊಡವ ತಕ್ಕ್ ಎಳ್ತ್‍ಕಾರಡ ಕೂಟಕ್ಕೆ 2019 ಎಪ್ರಿಲ್ 30ಕ್ಕೆ 25 ವರ್ಷ ತುಂಬಿದ್ದು, ಈ ಸಂದರ್ಭ ಬೆಳ್ಳಿ ಹಬ್ಬದ ವರ್ಷಾಚರಣೆಯನ್ನು ಮಾಡಲಾಗುವದು ಎಂದರು.

ವಿವಿಧ ಭಾಷೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಕೊಡವ ಭಾಷೆಯ ಓದುವ ಸ್ಪರ್ಧೆಯಲ್ಲಿ ಚೇನಂಡ ರಗು ಉತ್ತಪ್ಪ ಪ್ರಥಮ, ಪೆಮ್ಮಂಡ ಮೀರಾ ಬಿದ್ದಪ್ಪ ದ್ವಿತೀಯ, ಡಾ. ಆದೇಂಗಡ ಕುಟ್ಟಪ್ಪ ಹಾಗೂ ಜಮ್ಮಡ ಬಬಿತಾ ಪೂವಣ್ಣ ತೃತೀಯ ಸ್ಥಾನ, ಶಬ್ದ ಹೇಳುವ ಪೈಪೆÇೀಟಿಯಲ್ಲಿ ಮಚ್ಚಮಾಡ ಕಟ್ಟಿ ದೇವಯ್ಯ ಪ್ರಥಮ, ಡಾ. ಆದೇಂಗಡ ಕುಟ್ಟಪ್ಪ ದ್ವಿತೀಯ, ಚೇನಂಡ ರಘು ಉತ್ತಪ್ಪ ತೃತೀಯ ಹಾಗೂ ಪಾಲಚಂಡ ಗೀತಾ ಮತ್ತು ಮಲ್ಚೀರ ಪೆÇನ್ನಪ್ಪ ಸಮಾಧಾನಕರ ಬಹುಮಾನ ಪಡೆದುಕೊಂಡರು.

ವೇದಿಕೆಯಲ್ಲಿ ವೈಸ್ ಚಾನ್ಸಿಲರ್, ಕಂಬೆಯಂಡ ಶರಿ ಬೆಳ್ಯಪ್ಪ, ದಾನಿಗಳಾದ ವಲ್ಲಂಡ ಪ್ರಶಾಂತ್ ಮುತ್ತಣ್ಣ, ಲೋಪಮುದ್ರೆ ಕೊಡವ ಸಂಘದ ಅಧ್ಯಕ್ಷ ಮಚ್ಚಮಾಡ ಕಟ್ಟಿ ದೇವಯ್ಯ, ಲೇಖಕಿಯರಾದ ಪೆಮ್ಮಂಡ ಮೀರಾ ಬಿದ್ದಪ್ಪ ಹಾಗೂ ಜಮ್ಮಡ ಬಬಿತಾ ಪೂವಣ್ಣ ಉಪಸ್ಥಿತರಿದ್ದರು.