ಗೋಣಿಕೊಪ್ಪಲು, ಮೇ 8: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್)ಗೆ 10ನೇ ತರಗತಿ ಐಸಿಎಸ್ಇ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಲಭಿಸಿದೆ. ಇದರಿಂದ ಸತತ 21 ವರ್ಷದಿಂದ ಶೇ. 100 ರಷ್ಟು ಫಲಿತಾಂಶ ಪಡೆದ ಜಿಲ್ಲೆಯ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಪರೀಕ್ಷೆ ಕುಳಿತ 78 ವಿದ್ಯಾರ್ಥಿಗಳಲ್ಲಿ 62 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ, 16 ವಿದ್ಯಾರ್ಥಿಗಳು ಎ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಅಜ್ಜಮಾಡ ಬಿ. ದೇವಯ್ಯ ಶೇ. 98.2 ರಷ್ಟು ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಇಂಗ್ಲಿಷ್ 96, ಕನ್ನಡ 93, ಸಮಾಜ ವಿಜ್ಞಾನ 100, ಗಣಿತ 96, ವಿಜ್ಞಾನ 99, ಕಂಪ್ಯೂಟರ್ ಸೈನ್ಸ್ನಲ್ಲಿ 100 ಅಂಕಗಳು ಲಭಿಸಿವೆ.