ಕುಶಾಲನಗರ, ಮೇ 7: ಆಧುನಿಕ ಯುಗ ದಲ್ಲಿ ಸಿನಿಮಾ, ಧಾರವಾಹಿ ಗಳ ನಡುವೆ ರಂಗ ಭೂಮಿಗೆ ಪ್ರೋತ್ಸಾಹದ ಅಗತ್ಯತೆ ಯಿದೆ ಎಂದು ಚಲನಚಿತ್ರ ನಟ; ರಂಗಭೂಮಿ ಕಲಾವಿದ ಶೀನುಮಿತ್ರ ಹೇಳಿದರು. ಕುಶಾಲನಗರದ ಸ್ಕೂಲ್ ಆಫ್ ಏಂಜಲ್ ನೃತ್ಯ ಸಂಸ್ಥೆಯ ವತಿಯಿಂದ ಪಟ್ಟಣದ ಕಾರು ನಿಲ್ದಾಣ ದಲ್ಲಿ ಹಮ್ಮಿಕೊಂಡಿದ್ದ ಫನ್ ಫೇರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಅಧ್ಯಕ್ಷ ಭಾರತೀಶ್, ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿದರು.

ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ನೃತ್ಯ ಸಂಸ್ಥೆಯ ಅಧ್ಯಕ್ಷ ಅನೂಪ್, ಪ್ರಾಂಶುಪಾಲೆ ಏಂಜಲ್, ಉದ್ಯಮಿ ಗಳಾದ ಸಜಿ, ಎನ್.ಟಿ. ಜೋಸೆಫ್, ಪ. ಪಂ. ಸದಸ್ಯ ಎಂ.ಬಿ.ಸುರೇಶ್, ವಿ.ಜೆ. ನವೀನ್, ರಾಘವೇಂದ್ರ, ಸಿನೆಮಾ ಕೊರಿಯಾಗ್ರಾಫರ್ ಜಗದೀಶ್ ಇದ್ದರು. ಕಬಡ್ಡಿ ರಾಜ್ಯ ತಂಡದ ಆಟಗಾರ ಅವಿನಾಶ್ ಹಾಗೂ ಗ್ರೀನಿಶ್ ಡಿಕುನ್ನಾ, ಹತ್ತನೇ ತರಗತಿ ಯಲ್ಲಿ ಶೇ.94 ಅಂಕಗಳಿಸಿದ ವಿದ್ಯಾರ್ಥಿನಿ ಸ್ಪೂರ್ತಿ ಮತ್ತು ಕುಶಾಲನಗರದ ಪ.ಪಂ. ಪೌರ ಕಾರ್ಮಿಕರನ್ನು ಗೌರವಿಸ ಲಾಯಿತು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನಡೆದವು.