ನಾಪೆÉÇೀಕ್ಲು, ಮೇ 7: ಕೊಡವ ಭಾಷೆಯನ್ನು ಕೊಡವರೇ ಮಾತನಾಡದಿದ್ದರೆ ಭಾಷೆಯ ಉಳಿವು ಹೇಗೆ ಸಾಧ್ಯ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ ವಿಷಾಧಿಸಿ ದರು. ನಾಪೋಕ್ಲು ಭಗವತಿ ದೇವಳದ ಸಮುದಾಯ ಭವನದಲ್ಲಿ ಕೊಡವ ಮಕ್ಕಡ ಕೂಟದಿಂದ ಏರ್ಪಾಡಿಸಲಾಗಿದ್ದ ಆಟ್, ಪಾಟ್, ಪಡಿಪು ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಹೇಳಿದರು.
ಈ ಸಂದರ್ಭ ಉಳುವಂಗಡ ಕಾವೇರಿ ಉದಯ ಬರೆದಿರುವ ಪುಣ್ಯ ಕ್ಷೇತ್ರ ಪರಿಚಯ ಪುಸ್ತಕವನ್ನು ಬಿಡುಗಡೆ ಗೊಳಿಸಿದರು.
ನಂತರ ಮತನಾಡಿದ ಕಾವೇರಿ ಉದಯ ಈ ಪುಸ್ತಕವನ್ನು ತನ್ನ ತಂದೆ ದಿವಂಗತ ಚಂಗುಲಂಡ ಸಿ. ಮಾದಪ್ಪ ಅವರಿಗೆ ಅರ್ಪಿಸು ತ್ತೇನೆಂದರು.
ಮುಖ್ಯ ಅಥಿತಿ ನಿವೃತ್ತ ಸೇನಾಧಿಕಾರಿ ಕೊಂಡೀರ ನಾಣಯ್ಯ ಮಾತನಾಡಿ ಕೊಡವ ಮಕ್ಕಡ ಕೂಟ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದು ಸಂತೋಷ ತಂದಿದೆ ಎಂದರು. ಭಗವತಿ ದೇವಳದ ಗೌರವ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ ಮಾತನಾಡಿ ಕೊಡವ ಭಾಷೆ ಬೆಳವಣಿಗೆಗೆ ಈ ಹಿಂದೆ ನಡೆಸಿದ ಹಲವಾರು ಕಾರ್ಯಕ್ರಮಗಳು ಸಹಕಾರಿ ಎಂದರು.
ನಿವೃತ್ತ ಶಿಕ್ಷಕ ಕುಲ್ಲೇಟೀರ ಗುರುವಪ್ಪ ಮಾತನಾಡಿ ಮಕ್ಕಡ ಕೂಟವು ಇಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸಂಸ್ಕ್ರತಿ ಯನ್ನು ಬೆಳೆಸಲು ಮುಂದಾಗಿರುವ ದಕ್ಕೆ ಮೆಚ್ಚುಗೆ ವ್ಯಕ್ತ ಪಾಡಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಭಗವತಿ ದೇವಳದ ಅಧ್ಯಕ್ಷ ಕುಲ್ಲೇಟೀರ ಮಾದಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.