ಕಾಕೋಟುಪರಂಬು (ವೀರಾಜಪೇಟೆ), ಮೇ 6: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಪಂದ್ಯಾಟದಲ್ಲಿ ಕಾಳೇಂಗಡ, ತೀತಮಾಡ, ಕಂಬೀರಂಡ, ಇಟ್ಟೀರ ತಂಡಗಳು ಕ್ವಾಟರ್ ಫೈನಲ್ಸ್ ಹಂತ ತಲಪಿವೆ.

ಕಾಳೇಂಗಡ ತಂಡ 3-2 ಗೋಲುಗಳಿಂದ ಕಡೇಮಾಡ ತಂಡವನ್ನು ಪರಾಭವಗೊಳಿಸಿತು. ಕಾಳೇಂಗಡ ಪರ ಸುಬ್ಬಯ್ಯ (14ನಿ), ಪವನ್ (23.29ನಿ), ಕಡೇಮಾಡ ಪರ ಕಾವೇರಪ್ಪ (9ನಿ), ಚರ್ಮಣ್ಣ (24ನಿ) ಗೋಲು ಬಾರಿಸಿದರು.

ತೀತಮಾಡ ತಂಡ 2-1 ಗೋಲುಗಳಿಂದ ಐನಂಡ ತಂಡವನ್ನು ಸೋಲಿಸಿತು. ತೀತಮಾಡ ಪರ ಬೋಪಣ್ಣ (26ನಿ), ಕಾಳಪ್ಪ (34ನಿ), ಐನಂಡ ಪರ ಪೂವಣ್ಣ (34ನಿ)ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು.

ಕಂಬೀರಂಡ ತಂಡ ಪೆಮ್ಮಂಡ ತಂಡವನ್ನು 6-5 ಗೋಲುಗಳಿಂದ ಸಡನ್ ಡೆತ್‍ನಲ್ಲಿ ಮಣಿಸಿದರು. ನಿಗದಿತ ಅವದಿಯಲ್ಲಿ ಇತ್ತಂಡಗಳು ಯಾವದೆ ಗೋಲು ಗಳಿಸಲಿಲ್ಲ. ಕಂಬೀರಂಡ ಪರ ಟೈ ಬ್ರೇಕರ್‍ನಲ್ಲಿ ಯೋಗೇಶ್, ಮಯೂರ್, ಬೋಪಣ್ಣ, ಸತೀಶ್, ಸಡನ್ ಡೆತ್‍ನಲ್ಲಿ ಬೋಪಣ್ಣ, ಪೆಮ್ಮಂಡ ಪರ ಟೈ ಬ್ರೇಕರ್‍ನಲ್ಲಿ ಸೋಮಣ್ಣ, ಚರನ್, ಕ್ಷರಣ್, ಪಿ.ಯು ಸೋಮಣ್ಣ ಗೋಲು ಗಳಿಸಿದರು.

ಇಟ್ಟಿರ ತಂಡ 1-0 ಗೋಲಿನಿಂದ ಪುಚ್ಚಿಮಾಡ ತಂಡವನ್ನು ಪರಾಭವಗೊಳಿಸಿತು ಇಟ್ಟೀರ ಪರ ಪೂವಪ್ಪ (26ನಿ) ಗೋಲು ದಾಖಲಿಸಿ ತಂಡವನ್ನು ಕ್ವಾಟರ್ ಫೈನಲ್ ಹಂತಕ್ಕೆ ತಲಪಿಸಿದರು.