ನಾಪೋಕ್ಲು, ಮೇ 6: ಕೊಡಗು ಜಿಲ್ಲಾ ಗೊಲ್ಲ ಸಮಾಜದ ಆಶ್ರಯದಲ್ಲಿ ಯುವ ವೇದಿಕೆ ವತಿಯಿಂದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕ್ರಿಕೆಟ್ ಪಂದ್ಯಾಟದಲ್ಲಿ ಅಯ್ಯಂಗೇರಿಯ ಆಚೀರ ತಂಡವು ಪೈನಲ್ ಪಂದ್ಯಾಟದಲ್ಲಿ ಮಡಿಕೇರಿಯ ಅರೆಯಂಡ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಡಿಕೇರಿಯ ಅರೆಯಂಡ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.(ಮೊದಲ ಪುಟದಿಂದ) ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅರೆಯಂಡ ತಂಡ 6 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅಯ್ಯಂಗೇರಿಯ ಆಚೀರ ತಂಡವು ಬಿರುಸಿನ ಆಟವಾಡಿ ಕೊನೆಯ ಓವರ್‍ನಲ್ಲಿ ಕೊನೆಯ ಎಸೆತದಲ್ಲಿ ಗುರಿ ಸಾಧಿಸಿ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಕೊಂಡಿತು. ಪಂದ್ಯಾಟದಲ್ಲಿ ಗೊಲ್ಲ ಜನಾಂಗದ ಒಟ್ಟು ಹನ್ನೆರಡು ತಂಡಗಳು ಪಾಲ್ಗೊಂಡಿದ್ದವು.ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಡಿಕೇರಿ ಠಾಣೆಯ ಸಹಾಯಕ ಉಪನಿರೀಕ್ಷಕ ಅರೆಯಂಡ ಕುಶಾಲಪ್ಪ ಮಾತನಾಡಿ, ಜನಾಂಗದ ಯುವ ಜನರು ಕ್ರೀಡಾಸ್ಪೂರ್ತಿಯಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವದು ಮುಖ್ಯ. ಸೋಲು ಗೆಲವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೊಲ್ಲ ಸಮಾಜದ ಆಚೀರ ನಾಣಯ್ಯ ಮಾತನಾಡಿ ಸಮಾಜ ಬೆಳೆಯಲು ಎಲ್ಲರು ಸಹಕಾರ ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಅನಿತಾ ಪ್ರಾರ್ಥಿಸಿದರು. ಗೊಲ್ಲ ಸಮಾಜದ ಪ್ರಧಾನ ಕಾರ್ಯದರ್ಶಿ ಚೋಕಿರ ವಾಸುದೇವ್ ಸ್ವಾಗತಿಸಿದರು. ಕ್ರೀಡಾ ಸಮಿತಿಯ ಅಧ್ಯಕ್ಷ ಕಡವಡೀರ ಸಂತೋಷ್, ಉಪಾಧ್ಯಕ್ಷ ಅರೆಯಂಡ ಜಿ. ಕುಶಾಲಪ್ಪ, ಕಾರ್ಯದರ್ಶಿ ತೊತ್ತಿಯಂಡ ಕಿರಣ್ ಮತ್ತಿತರರು ಇದ್ದರು.
ಬೆಸ್ಟ್ ಬ್ಯಾಟ್ಸ್ ಮ್ಯಾನ್ ಆಗಿ ಆಚೀರ ಮುಕುಂದಮ್ಯಾನ್ ಆಫ್ ದಿ ಸೀರೀಸ್ ಆಗಿ ಆಚೀರ ಮೋಹಿತ್ ಬೆಸ್ಟ್ ಬೌಲರ್ ಆಗಿ ತೊತ್ತಿಯಂಡ ವಿನುಬೆಸ್ಟ್ ನಿರೂಪಣೆಕಾರ ಆಗಿ ತೊತ್ತಿಯಂಡ ಅಮಿತ್ ಶ್ಲಾಘನೆಗೆ ಒಳಗಾದರು. -ದುಗ್ಗಳ ಸದಾನಂದ