ಮಡಿಕೇರಿ, ಮೇ 6: ಪ್ರಸಕ್ತ (2019-20) ಸಾಲಿನ ಪ್ರಥಮ ಪಿಯುಸಿ (ಪಿಸಿಎಂಬಿ ಮತ್ತು ಪಿಸಿಎಂಸಿ)ಗೆ ಪ್ರವೇಶಾತಿ-ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಉಚಿತವಾಗಿ ಊಟ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡುವದರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುವದು. ನೀಟ್, ಸಿಇಟಿ, ಜೆಇಇ ಗಳಿಗೆ ತರಬೇತಿ ನೀಡಲಾಗುವದು. ಈಗಾಗಲೇ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಲು ತಾ. 15 ಕೊನೆಯ ದಿನವಾಗಿದೆ. ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ ಹಾಗೂ ಮೊರಾಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಬಸವನಹಳ್ಳಿ, ಸೋ.ಪೇಟೆ ತಾಲೂಕು, ಎಲ್ಲಾ ಮೊರಾರ್ಜಿ, ವಾಜಪೇಯಿ, ಏಕಲವ್ಯ ವಸತಿ ಶಾಲೆಗಳಲ್ಲಿ ಅರ್ಜಿಯನ್ನು ಪಡೆಯಬಹುದು. ಅರ್ಜಿ ಭರ್ತಿ ಮಾಡಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿಗೆ ನೀಡಬೇಕು. ಹೆಚ್ಚಿನ ಮಾಹಿತಿಗೆ 9945707234, 9008068681 ಹಾಗೂ 7483871358 ನ್ನು ಸಂಪರ್ಕಿಸಬಹುದು ಎಂದು ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.