ಕುಶಾಲನಗರ, ಮೇ 6: ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ 14 ಮಂದಿಯನ್ನು ಬಂಧಿಸಿ, ಜೂಜಾಟಕ್ಕೆ ಬಳಸಿದ ವಸ್ತುಗಳು ಸೇರಿದಂತೆ ರೂ. 1 ಲಕ್ಷದ 29 ಸಾವಿರದ 480 ನಗದು ವಶಪಡಿಸಿಕೊಂಡಿದ್ದಾರೆ.

ಹೆಗ್ಗಡಹಳ್ಳಿ ಕೋಟೆ ಗ್ರಾಮದ ಕಾಫಿ ತೋಟದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನೆÀ್ನಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಠಾಣಾಧಿಕಾರಿ ನಂದೀಶ್ ಮತ್ತು ಸಿಬ್ಬಂದಿ ಭಾನುವಾರ ಸಂಜೆ ದಾಳಿ ನಡೆಸಿದ್ದಾರೆ.

ಜೂಜಾಟವಾಡುತ್ತಿದ್ದ ಶಿವಮೂರ್ತಿ, ಪುಟ್ಟರಾಜು, ಪ್ರಸನ್ನ, ರಮೇಶ, ಪ್ರದೀಪ, ಲೋಕೇಶ್, ರವಿ, ಶ್ರೀನಿವಾಸ್, ವಸಂತ, ಮಹೇಶ್, ಜಯರಾಮ, ಯೋಗೇಶ್, ಮಂಜುನಾಥ, ಹರೀಶ್ ಎಂಬವರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ವಿವೇಕ್, ಪ್ರಸನ್ನ, ಸಂಪತ್, ಅಜಿತ್, ಮಹೇಶ್, ನಾಗರಾಜ, ಪ್ರಿಯಾಕುಮಾರ್ ಪಾಲ್ಗೊಂಡಿದ್ದರು