*ಗೋಣಿಕೊಪ್ಪಲು, ಮೇ 6 : ಊಟಿಯಲ್ಲಿ 8 ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಚಾರಣ ಶಿಬಿರಕ್ಕೆ ಜಿಲ್ಲೆಯಿಂದ 7 ಜನ ಎನ್ ಸಿಸಿ ಕೆಡೆಟ್ಗಳು ಪಾಲ್ಗೊಂಡಿದ್ದಾರೆ.ಕೂರ್ಗ್ ಪಬ್ಲಿಕ್ ಶಾಲೆಯ ವೀಕ್ಷ ನೂರಿತಾಯ, ವೃದ್ಧಿ ದೇವಯ್ಯ, ಯುವಿಕಾ ಅಪ್ಪಯ್ಯ, ಎಚ್.ಎಂ. ಪ್ರಾರ್ಥನಾ ಅವರೊಂದಿಗೆ ಕಾವೇರಿ ಕಾಲೇಜಿನ ನಾಲ್ವರು ಕೆಡೆಟ್ಗಳು ಮಡಿಕೇರಿಯಿಂದ ಭಾನುವಾರ ಬೆಳಿಗ್ಗೆ ಪ್ರಯಾಣ ಬೆಳೆಸಿದರು. ಟ್ರೆಕಿಂಗ್ನಲ್ಲಿ 65 ಕಿ.ಮೀ. ನಡಿಗೆ ಮೂಲಕ 7500 ಅಡಿ ಎತ್ತರದ ಪರ್ವತ ಏರಲಿದ್ದಾರೆ. ಇವರೊಂದಿಗೆ ಎನ್ಸಿಸಿ ಅಧಿಕಾರಿ ಮೋನಿಕಾ ಪಾಲ್ಗೊಳ್ಳಲಿದ್ದಾರೆ ಎಂದು ಕಾಪ್ಸ್ ಶಾಲೆ ಎನ್ಸಿಸಿ ಅಧಿಕಾರಿ ಬಿ.ಎಂ. ಗಣೇಶ್ ತಿಳಿಸಿದ್ದಾರೆ.