ಮಡಿಕೇರಿ, ಮೇ 6: ಇಲ್ಲಿನ ವಾಂಡರರ್ಸ್ ಸ್ಪೋಟ್ರ್ಸ್‍ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ದಿ.ಸಿ.ವಿ. ಶಂಕರಸ್ವಾಮಿ ಸ್ಮರಣಾರ್ಥ ನಡೆದ ಉಚಿತ ಯೋಗ, ಪ್ರಾಣಾಯಾಮ ಹಾಗೂ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಹಿರಿಯ ಆಟಗಾರ ಕೋಟೇರ ಎನ್. ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಅಧ್ಯಕ್ಷ ಬಿ.ಕೆ. ಸುಬ್ಬಯ್ಯ ಅಂತರ್ರಾಷ್ಟ್ರೀಯ ಅಥ್ಲೆಟ್ ಹಾಗೂ ಭಾರತೀಯ ಸರ್ವಿಸಸ್‍ನ ಅಥ್ಲೆಟಿಕ್ ತರಬೇತುದಾರ ಬಿ.ಸಿ. ತಿಲಕ್, ಜಮ್ಮುವಿನಿಂದ ಬಂದಿದ್ದ ಯೋಗಿಣಿ, ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ವಾಂಡರರ್ಸ್ ಕ್ಲಬ್‍ನ ಬಾಬು ಸೋಮಯ್ಯ, ಶ್ಯಾಂ ಪೂಣಚ್ಚ, ಅಶೋಕ್ ಅಯ್ಯಪ್ಪ, ಗಣೇಶ್, ಬಿ.ಬಿ. ಆನಂದ, ವೆಂಕಟೇಶ್, ಲಕ್ಷ್ಮಣ್‍ಸಿಂಗ್, ನಂದ, ಮಹಮ್ಮದ್ ಅಸಿಫ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಕಲಿತ ವಿಚಾರಗಳನ್ನು ಮೈಗೂಡಿಸಿಕೊಂಡು ನಿರಂತರ ಅಭ್ಯಾಸದ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುವಂತೆ, ಸಿ.ವಿ. ಶಂಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಅತಿಥಿಗಳು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಹಾಕಿ, ಅಥ್ಲೆಟಿಕ್, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತ ರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಶಿಬಿರಾರ್ಥಿಗಳಾದ ಆರ್ಯ ಹಾಗೂ ಆಕಾಂಕ್ಷ ಪ್ರಾರ್ಥಿಸಿದರೆ, ತಪಸ್ಯ ನಿರೂಪಿಸಿದರು. ಯಜ್ಞ ಸ್ವಾಗತಿಸಿದರೆ, ಆರ್ಯ ವಂದಿಸಿದರು.
ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕ ವೆಂಕಟೇಶ್ ಹಾಗೂ ಚಿತ್ರಕಲಾ ಶಿಕ್ಷಕಿ ಪ್ರಮೀಳಾ ಅವರುಗಳನ್ನು ಸನ್ಮಾನಿಸಲಾಯಿತು.