ಸಿದ್ದಾಪುರ, ಮೇ 7: ಚೆನ್ನಂಗಿ ಗುಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವ ತಾ. 8 ಹಾಗೂ 9 ರಂದು ಉದಯಕುಮಾರ್ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.
ತಾ. 8 ರಂದು ಸಂಜೆ 6 ಗಂಟೆಗೆ ಪಂಚಗವ್ಯ, ಗಣಪತಿಪೂಜೆ, ವಾಸ್ತುಪೂಜೆ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.
ತಾ. 9 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಹೋಮ, ನವಕ ಕಳಶ, ರುದ್ರಾಭಿಷೇಕ, ನಾಗ ತಂಬಿಲ, 11 ಗಂಟೆಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಲಿದೆ.