ವೀರಾಜಪೇಟೆ, ಮೇ 7: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಕೆದಮುಳ್ಳೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.10 ರಿಂದ 12ರವರೆಗೆ ಪುರುಷರ ಸೂಪರ್ ನೈನ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ಕ್ರೀಡಾ ಪಂದ್ಯಾಟದ ಉದ್ಘಾಟನಾ ಸಮಾರಂಭವು ಅಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್, ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪಂದ್ಯಾಟದ ಪ್ರಥಮ ಸ್ಥಾನ ಲಭಿಸುವವರಿಗೆ 25,000 ರೂ. ನಗದು ಮತ್ತು ಪಾರಿತೋಷಕ, ದ್ವೀತಿಯ ಸ್ಥಾನ 12,500 ರೂ. ನಗದು ಮತ್ತು ಪಾರಿತೋಷಕ ಕ್ರೀಡಾ ಆಯೋಜಕರಿಂದ ನೀಡಲಾಗುತ್ತದೆ.
ಆಸಕ್ತ ತಂಡಗಳು 9482246941 ಮತ್ತು 8762589441 ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.