ಗುಡ್ಡೆಹೊಸೂರು, ಮೇ 6: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದೆ. ಕೇರಳದ ನೋಂದಣಿ ಹೊಂದಿರುವ ವಾಗೆನೈರ್ ಕಾರಿನ ಟಯರ್ ಒಡೆದು ಮುಂಬಾಗದಲ್ಲಿ ಚಲಿಸುತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಪಲ್ಟಿಯಾಗಿ ಸುಮಾರು 100 ಮೀ. ದೂರದಲ್ಲಿ ಅರಣ್ಯದಂಚಿನ ಚರಂಡಿಯಲ್ಲಿ ಬಿದ್ದಿದೆ. ಕಾರಿನಲ್ಲಿ ಚಾಲಕ ಸೇರಿ 4 ಮಂದಿಯಿದ್ದು ಯಾರಿಗೂ ತೊಂದರೆಯಾಗದೆ ಪಾರಾಗಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಗಣೇಶ್ ಕುಡೆಕ್ಕಲ್.