ವೀರಾಜಪೇಟೆ, ಮೇ 6: ತೆಲುಗರ ಬೀದಿಯ ಶ್ರೀ ದಕ್ಷಿಣಾ ಮಾರಿಯಮ್ಮ ದೇವಿಯ ವಾರ್ಷಿಕ ಕರಗ ಮಹೋತ್ಸವವು ತಾ. 7 ರಿಂದ (ಇಂದಿನಿಂದ) ತಾ. 10ರ ವರಗೆ ಜರುಗಲಿದೆ.
ವಾರ್ಷಿಕ ಕರಗ ಮಹೋತ್ಸವವು ಗೌರಿ ಕೆರೆಯಿಂದ ಆಗಮಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾತ್ರಿ ದೇವಾಲಯಕ್ಕೆ ಆಗಮಿಸುವದು. ಬುಧವಾರ ಸಂಜೆ ದೇವಿಗೆ ತಂಬಿಟ್ಟು ನಂದಾದೀಪ ಆರತಿ ನಡೆಯಲಿದೆ. ಗುರುವಾರ ಶ್ರಿ ಮಾರಿಯಮ್ಮ ದೇವಿಗೆ ವಿಶೇಷ ಅಲಂಕಾರ, ಮಹಾ ಮಂಗಳಾರತಿ, ಮಹಾ ಸಂಕಲ,್ಪ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. ದೇವಿಗೆ ವಿಶೇಷ ಪೂಜೆ ಮತ್ತು ಮಾಹಾಪೂಜೆ ನಂತರ ಸಂಜೆ ದೇವಾಲಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.