*ಗೋಣಿಕೊಪ್ಪಲು, ಮೇ 7 : ಆದಿವಾಸಿಗಳ ಹಬ್ಬ ಜೇನು ಕುರುಬ ಕುಟುಂಬಗಳ ನಡುವೆ ನಡೆಯುವ ಚಿಕ್ಕ ಮನೆ ತಾಯಿ ಟೆನ್ನಿಸ್ ಬಾಲ್, ಕ್ರಿಕೆಟ್ ಪಂದ್ಯಾಟ ತಾ. 8ರಿಂದ (ಇಂದಿನಿಂದ) ತಿತಿಮತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ತಿತಿಮತಿ ಜೇನು ಕುರುಬ ಯುವಕ ಸಂಘದ ಆಶ್ರಯದಲ್ಲಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾಟ ಐದು ದಿನಗಳ ಕಾಲ ನಡೆಯಲಿದೆ. ಇದೇ ಸಂದರ್ಭ ಮಹಿಳೆಯರಿಗೆ ಹಗ್ಗ ಜಗ್ಗಾಟ, ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ರಘು ಮಾಹಿತಿ ನೀಡಿದ್ದಾರೆ.
ಜನಾಂಗವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಜೇನು ಕುರುಬ ಸಮುದಾಯದ ಪಂದ್ಯಾಟ ನಡೆಸಲಾಗುತ್ತಿದೆ.