ಸುಂಟಿಕೊಪ್ಪ, ಮೇ.5: ಆಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಸಂತೆದಿನ ಭಾನುವಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಉಲುಗುಲಿ ರಸ್ತೆಯ ನಿವಾಸಿ ಪದ್ಮನಾಭ ಸಂತೆ ದಿನ ಕೇರಳ ರಾಜ್ಯದ ಲಾಟರಿ ಟಿಕೇಟನ್ನು ಮಾರಾಟಮಾಡುತ್ತಿದ್ದುದನ್ನು ಗಮನಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿಯೋರ್ವರನ್ನು ಕಳುಹಿಸಿ; ಲಾಟರಿ ಟಿಕೇಟು ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ರಾಜ್ಯ ಹೆದ್ದಾರಿ ಬಳಿಯಲ್ಲೇ ಸಾರ್ವಜನಿಕರ ಮುಂದೆಯೆ ಕೇರಳ ಲಾಟರಿ ಟಿಕೇಟನ್ನು ಜೇಬಿನಿಂದ ತೆಗೆದು ಮಾರುವೇಷದಲ್ಲಿದ್ದ ಪೊಲೀಸ್ ಪೇದೆಗೆ ನೀಡಿದಾಗ; ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಟಿಕೇಟು ಹಾಗೂ ನಗದು ವಶಪಡಿಸಿಕೊಂಡು ಆಕ್ರಮ ಟಿಕೇಟು ಮಾರಾಟದ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಸುಂಟಿಕೊಪ್ಪದಲ್ಲಿ ಆಕ್ರಮವಾಗಿ ಕೇರಳ ಲಾಟರಿ ಮಾರಾಟವಾಗುತ್ತಿರುವ ಬಗ್ಗೆ ‘ಶಕ್ತಿ’ ವರದಿ ಮಾಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.