ಸುಂಟಿಕೊಪ್ಪ, ಮೇ5: ಕೆದಕಲ್‍ನ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನೇರವೇರಿದವು. ಕೆದಕಲ್ ಭದ್ರಕಾಳೇಶ್ವರಿ ಉತ್ಸವದ ಅಂಗವಾಗಿ ಕೊಂಬುಕೊಟು, ವಾಲಗದೊಂದಿಗೆ ಕೊಂಬಾಟ್, ಚೇರಿಯಾಟ್, ಬಿಲ್ಲಾಟ್, ಭಂಡಾರ ಹಾಕುವದು ತೀರ್ಥ ಪ್ರಸಾದ ವಿನಿಯೋಗ ಬಾಳೆ ಸೂರೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮಗಳು ನಡೆದವು. ಸಣ್ಣ ಹಬ್ಬದ ಅಂಗವಾಗಿ ಕೊಂಬಾಟ, ಚೌರಿಯಾಟ, ಬಿಲ್ಲಾಟ್, ಭಂಡಾರ ಹಾಕುವದು ಹಾಗೂ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಗ್ರಾಮದ ಹಬ್ಬವು ಸಂಪನ್ನಗೊಂಡಿತು.