ಮಡಿಕೇರಿ, ಮೇ 5: ಪ್ಲಾಂಟರ್ಸ್ ಕ್ಲಬ್ ದೇವಣಗೇರಿ ಇವರ ವತಿಯಿಂದ ಮನೆ ಹೆಸರು ಹೊಂದಿರುವ ಕುಟುಂಬದವರ ‘5 ಎ ಸೈಡ್’ ಫುಟ್ಬಾಲ್ ಪಂದ್ಯಾಟವನ್ನು ತಾ. 7 ರಿಂದ 12 ರವರೆಗೆ ದೇವಣಗೇರಿ ಪ್ರಾಥಮಿಕ ಸರಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದೆ.ತಾ. 7 ರಂದು ಉದ್ಘಾಟನಾ ಪಂದ್ಯ ಬೆಳಿಗ್ಗೆ 9 ಗಂಟೆಗೆ ನಡೆಯಲಿದ್ದು, ಪಂದ್ಯಾಟವನ್ನು ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಉದ್ಘಾಟಿಸಲಿರುವರು. ಅಂದು ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯನ್ನು ಪಾಲೆಕಂಡ ಅಯ್ಯಪ್ಪ ಉದ್ಘಾಟಿಸಲಿದ್ದಾರೆ. ಫೈನಲ್ ಪಂದ್ಯಾಟ ತಾ. 12 ರಂದು ಅಪರಾಹ್ನ 2 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉಪಸ್ಥಿತರಿರುವರು. ಅತಿಥಿಗಳಾಗಿ ಕಡೇಮಾಡ ದೇವಯ್ಯ ಪಾಲ್ಗೊಳ್ಳಲಿದ್ದು, ಕಡೇಮಾಡ ಗೌರಮ್ಮ ನಂಜಪ್ಪ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.