ಮಡಿಕೇರಿ, ಮೇ 5: ವೀರಾಜಪೇಟೆ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ವೀರಾಜಪೇಟೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಿರುವದರಿಂದ ತಾ. 6 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ವೀರಾಜಪೇಟೆ, ಕ್ಲಬ್ ಮಹೇಂದ್ರ, ಬೋಯಿಕೇರಿ, ಚಿಕ್ಕಪೇಟೆ ಜಂಕ್ಷನ್, ಕದನೂರು, ಭಗವತಿ ದೇವಸ್ಥಾನ, ಪಾಲಂಗಾಲ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.