ವೀರಾಜಪೇಟೆ, ಮೇ 5: ಭಾಗಮಂಡಲ ಬಳಿಯ ತಾವೂರು ಎಂಬಲ್ಲಿ ಇಬ್ರಾಹಿಂ ಎಂಬವರ ದನದ ಕೊಟ್ಟಿಗೆಯಲ್ಲಿ ಸೇರಿಕೊಂಡು ಭಯಗೊಳಿಸಿದ್ದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಪೊನ್ನೀರ ಸ್ನೇಕ್ ಗಗನ್ ಸೆರೆ ಹಿಡಿದು ಪೆರುಂಬಾಡಿಯ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಶುಕ್ರವಾರ ರಾತ್ರಿ ಇಬ್ರಾಹಿಂ ಮನೆಯ ದನದ ಕೊಟ್ಟಿಗೆಗೆ ಸೇರಿಕೊಂಡಿದ್ದ ಕಾಳಿಂಗ ಸರ್ಪ ರಾತ್ರಿ ವೇಳೆಯಲ್ಲಿ ಬುಸುಗು ಡುತ್ತಿದ್ದು, ಇಬ್ರಾಹಿಂ ಗಗನ್ ಅವರನ್ನು ಸಂಪರ್ಕಿಸಿದರು. ಸುಮಾರು ಹತ್ತು ಅಡಿ ಉದ್ದ ಮೂರೂವರೆ ಇಂಚು ದಪ್ಪದ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ನಂತರ ಅಭಯಾರಣ್ಯಕ್ಕೆ ಬಿಡಲಾಯಿತು. ಕಾಫಿ ತೋಟ, ಮನೆ, ದನದ ಕೊಟ್ಟಿಗೆಯಲ್ಲಿ ಸೇರಿಕೊಂಡಿರುವ ಯಾವದೇ ವಿಧದ ಹಾವುಗಳು, ವಿಷ ಸರ್ಪಗಳನ್ನು ಸೆರೆ ಹಿಡಿದು ಜೀವಂತವಾಗಿ ಅಭಯಾರಣ್ಯಕ್ಕೆ ಬಿಡಲಾಗುವದು. ಸಹಾಯ ಹಸ್ತ ಬೇಕಾದವರು ಪೊನ್ನೀರ ಸ್ನೇಕ್ ಗಗನ್ ಅವರ ಮೊ. 9945102695 ಅಥವಾ 8277445589 ಇವರನ್ನು ಸಂಪರ್ಕಿಸಬಹುದು.