ಮಡಿಕೇರಿ, ಮೇ 4: ಘಟನೆ ಕಳೆದು 10 ದಿವಸವಾಯಿತು.
ನಗರದ ಅರವಿಂದ್ ಮೋಟಾರ್ಸ್ ಸಮೀಪದ ಕಾಂಕ್ರೀಟ್ ರಸ್ತೆಯನ್ನು ಜೆ.ಸಿ.ಬಿ. ಯಂತ್ರ ಬಳಸಿ ಅವೈಜ್ಞಾನಿಕವಾಗಿ ಯು.ಜಿ.ಡಿ. ಕೆಲಸಕ್ಕೆ ಧ್ವಂಸಗೊಳಿಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್, ಕಾಮಗಾರಿ ನಿಲ್ಲಿಸಿದ್ದರು. ಅವರ ಸಮ್ಮುಖದಲ್ಲಿಯೇ ಹಾನಿಗೊಳಗಾದ ರಸ್ತೆಯನ್ನು ಎರಡು ದಿನಗಳಲ್ಲಿ ಸರಿಪಡಿಸಿಕೊಡುವದಾಗಿ ಸಂಸ್ಥೆಯ ಹಿರಿಯ ಅಧಿಕಾರಿ ಜೀವನ್ ಸಾರ್ವಜನಿಕರಿಗೆ ಲಿಖಿತವಾಗಿ ಬರೆದುಕೊಟ್ಟರು. ಮೂರು ದಿನಗಳ ಬಳಿಕ ಪತ್ರಕರ್ತರು ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದಾಗ ತಾನು ಇಲಾಖೆಯ ಪರವಾಗಿ ಬರೆದುಕೊಟ್ಟಿದ್ದು, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪುಕ್ಕಟೆ ಸಲಹೆ ನೀಡಿದರು.
ಈಗ ರಸ್ತೆ ಧ್ವಂಸಗೊಂಡ ಸ್ಥಿತಿಯಲ್ಲಿಯೇ ಇದೆ. ಜನ ತಮಗೆ ಏನೂ ಆಗದಂತೆ ನಿರ್ಲಿಪ್ತವಾಗಿದ್ದಾರೆ. ಧ್ವಂಸಗೊಳಿಸಿದವರು ತಾವೇನೂ ತಪ್ಪು ಮಾಡಿಲ್ಲ ಎನ್ನುವಂತೆ ಆರಾಮವಾಗಿದ್ದಾರೆ.
ಶಾಸಕರ ಮಾತಿಗೆ ಕವಡೆ ಕಾಸಿನ ಬೆಲೆಯಿಲ್ಲವೆಂಬದು ಸಾಬೀತಾಗಿದೆ. - ಚಿದ್ದು