ಮಡಿಕೇರಿ, ಮೇ 3: ಮಡಿಕೇರಿ ನಗರದ ಹೊರ ವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ನಿನ್ನೆ ಸಂಜೆ ಜರುಗಿದ ನಿಶ್ಚಿತಾರ್ಥ ಸಮಾರಂಭ ವೊಂದರಲ್ಲಿ ಸೋದರ ಸಂಬಂಧಿಗಳ ನಡುವೆ ಗಲಭೆ ನಡೆದ ಪ್ರಕರಣ ವರದಿಯಾಗಿದೆ.ಈ ಸಮಾರಂಭದಲ್ಲಿ ಚಿತ್ರನಟಿ ಹರ್ಷಿಕಾ ಕೂಣಚ್ಚ, ನಟ ಭುವನ್ ಪೊನ್ನಣ್ಣ ಭಾಗವಹಿಸಿದ್ದು, ಇಬ್ಬರು ಯುವಕರು ಹರ್ಷಿಕಾರೊಂದಿಗೆ ಅನುಚಿತವಾಗಿ ವರ್ತಿಸಿರುವದಾಗಿ ಹೇಳಲಾಗಿದೆ. ಇದರೊಂದಿಗೆ ನಟ ಭುವನ್ ಮೇಲೆ ಹಲ್ಲೆ ಮಾಡಿರುವ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಬಗ್ಗೆ ಭುವನ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಇವರ ಸಂಬಂಧಿಗಳಾದ ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ದೇವಯ್ಯ ವಿರುದ್ಧ ಸೆಕ್ಷನ್ 354, 323 ಹಾಗೂ 326 ರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಂತೆ ಇಂದು ಬನ್ಸಿ ಪೊನ್ನಪ್ಪನನ್ನು ಬಂಧಿಸಲಾಗಿದೆ. ಇದೇ ವಿಚಾರದಲ್ಲಿ ನಟಿ ಹರ್ಷಿಕಾ ಕೂಡ ಇಂದು ಇಲ್ಲಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜ ರಾಗಿದ್ದು, ನ್ಯಾಯಾಧೀಶರ ಎದುರು ಹೇಳಿಕೆ ನೀಡಿರುವದಾಗಿ ತಿಳಿದು ಬಂದಿದೆ.

ಬನ್ಸಿ ಪೊನ್ನಪ್ಪ ಹಾಗೂ ಬಿಪಿನ್ ನಿನ್ನೆ ಸಮಾರಂಭದ ನಡುವೆ ಹರ್ಷಿಕಾಳೊಂದಿಗೆ ಅನುಚಿತವಾಗಿ ವರ್ತಿಸಿದ್ದರೆನ್ನಲಾಗಿದ್ದು, ಈ ಬಗ್ಗೆ ಭುವನ್ ಪ್ರಶ್ನಿಸಿದ ಸಂದರ್ಭ ಅವರ ಮೇಲೆ ಹಲ್ಲೆ ನಡೆಸಿರುವದಾಗಿ ಹೇಳ ಲಾಗಿದೆ. ಇದಾದ ಬಳಿಕ ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಭÀುವನ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವಿಚಾರದ ಬಗ್ಗೆ ಹರ್ಷಿಕಾ ನ್ಯಾಯಾಧೀಶರ ಎದುರು ವಿವರ ನೀಡಿ ರುವದಾಗಿ ಮಾಹಿತಿ