ಶ್ರೀಮಂಗಲ, ಮೇ 4 : ಶ್ರೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀರುಗ ಗ್ರಾಮದ ಚೊಪ್ಪುಡಿಕೊಲ್ಲಿ ಪಾಲ್‍ಪಾರ್ ಚಾಮುಂಡಿ, ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ವಿಜೃಂಬಣೆಯಿಂದ ನಡೆಯಲಿದೆ.

ತಾ. 5ರಂದು (ಇಂದು) ನಿತ್ಯ ಪೂಜೆ, ಅಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ತುಲಾಭಾರ ಸೇವೆಯೊಂದಿಗೆ ಸಂಜೆ ಚಾಮುಂಡಿ ದೇವಿಯ ಉತ್ಸವ ಮೂರ್ತಿಯ ನರ್ತನ, ಅವಭೃತÀ ಸ್ನಾನ ನೆರವೇರಲಿದೆ. ತಾ. 6 ರಂದು ರಾತ್ರಿ 10 ಗಂಟೆಗೆ ಚೆಕ್ಕೇರ ಸುಬ್ಬಯ್ಯ ಅವರ ಮನೆಯಿಂದ ದೈವ ಉಪಾಸಕರು ಮೆರವಣಿಗೆಯಲ್ಲಿ ಶ್ರೀ ಪಾಲ್‍ಪಾರ್ ಚಾಮುಂಡಿ ದೇವಿಯ ದೇವಸ್ಥಾನಕ್ಕೆ ಬಂದು ದೈವ ಉಪಾಸನೆಯೊಂದಿಗೆ ಚಾಮುಂಡಿ ದೇವಿಯ ತೋತ ತೆರೆ, ಕುಟ್ಟಿಚಾತ ತೆರೆ, ಬೈರವ ತೆರೆ, ಕರಿವಾಳ್ ಭಗವತಿ ತೆರೆ ಹಾಗೂ ನುಚ್ಚುಟ್ಟೆ ತೆರೆ ಕಟ್ಟಲಾಗುವದು.

ತಾ. 7ರಂದು ಪೂರ್ವಾಹ್ನ 10 ಗಂಟೆಗೆ ಚೆಕ್ಕೇರ ಸುಬ್ಬಯ್ಯ ಅವರಿಂದ ಚಾಮುಂಡಿ ದೇವಿಯ ಉಪಾಸನೆಯೊಂದಿಗೆ ವಿಷ್ಣುಮೂರ್ತಿ ತೆರೆ ಕಟ್ಟಲಾಗುವದು. ಈ ಸಂದರ್ಭ ವಿವಿಧ ಪೂಜಾ ಕೈಂಕರ್ಯಗಳು ನಡೆದ ನಂತರ ಮದ್ಯಾಹ್ನ 1 ಗಂಟೆಗೆ ಅನ್ನದಾನ, 1.30 ಗಂಟೆಗೆ ಚಾಮುಂಡಿ ದೇವಿಯ ಅಗ್ನಿ ಸ್ನಾನ, ವಿಷ್ಣುಮೂರ್ತಿ ದೇವರ ಅಗ್ನಿಕುಂಡ ಪ್ರವೇಶ ಹಾಗೂ ಭಕ್ತಾಧಿಗಳ ಅಗ್ನಿಕುಂಡ ಪ್ರವೇಶ ನಡೆಯುವದು. ಸಂಜೆ 4.30 ಗಂಟೆಗೆ ಗುಳಿಗ ತೆರೆ, ಸಂಜೆ 6 ಗಂಟೆಗೆ ಭಕ್ತಾಧಿಗಳು ಹರಕೆ ಒಪ್ಪಿಸಿದ ನಂತರ ರಾತ್ರಿ 10 ಗಂಟೆಗೆ ಫಲಹಾರ, ಹಾಗೂ ಊಟದೊಂದಿಗೆ ಹಬ್ಬ ಮುಕ್ತಾಯಗೊಳ್ಳುವದು.