ಕಾಕೋಟುಪರಂಬು (ವೀರಾಜಪೇಟೆ), ಮೇ 3: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪೌಢಶಾಲಾ ಮ್ಯೆದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಗೂ ಚಾಂಪಿಯನ್ಸ್ ಲೀಗ್ ಪಂದ್ಯಾಟದಲ್ಲಿ ಕೂತಂಡ, ಚೇಂದಂಡ, ಮುಕ್ಕಾಟಿರ(ಬೋಂದಾ) ಪರದಂಡ, ಮಂಡೆಪಂಡ, ಸೋಮೇಯಂಡ ತಂಡಗಳು ಗೆಲವು ಸಾಧಿಸಿವೆ.

ಮ್ಯೆದಾನ 1 ರಲ್ಲಿ ನಡೆದ ಲೀಗ್ ಪಂದ್ಯಾಟದಲ್ಲಿ ಚೇಂದಂಡ ಹಾಗೂ ಕೂತಂಡ ತಂಡಗಳು 1-1 ಗೋಲಿನ ಡ್ರಾನಲ್ಲಿ ಅಂತ್ಯ ಕಂಡಿತು. ಚೇಂದಂಡ ಪರ ಸುಬ್ಬಯ್ಯ (4ನಿ), ಕೂತಂಡ ಪರ ಬೋಪಣ್ಣ (18ನಿ) ಗೋಲು ಬಾರಿಸಿದರು.

ಮುಕ್ಕಾಟ್ಟಿರ(ಬೋಂದಾ) ತಂಡವು 5-1 ಗೋಲುಗಳಿಂದ ಚೆಪ್ಪುಡಿರ ತಂಡವನ್ನು ಪರಾಭವ ಗೊಳಿಸಿತು. ಮುಕ್ಕಾಟ್ಟಿರ ಪರ ಕರುಂಬಯ್ಯ (2.37ನಿ), ಚಿರನ್ (5ನಿ), ವಸಂತ್ (23ನಿ), ಪೂಣಚ್ಚ (36ನಿ), ಚೆಪ್ಪುಡಿರ ಪರ ಚೇತನ್(31ನಿ) ಗೋಲು ದಾಖಲಿಸಿದರು. ಕುಲ್ಲೇಟ್ಟಿರ ತಂಡ ಬಾರದ ಕಾರಣ ಆಯೋಜಕರು ಪರದಂಡ ತಂಡವನ್ನು ವಿಜಯಿ ಎಂದು ಘೋಷಿಸಿದರು. ಮಂಡೆಪಂಡ ತಂಡವನ್ನು ಪಳಂಗಂಡ ತಂಡ 2-0 ಗೋಲುಗಳಿಂದ ಪರಾಭವಗೊಳಿಸಿತು. ಮಂಡೇಪಂಡ ಪರ ಸಜನ್ ಅಚ್ಚಯ್ಯ (10ನಿ), ಕವನ್ (22ನಿ) ಗೋಲು ಗಳಿಸಿದರು. ಸೋಮೇಯಂಡ ತಂಡ ಬೊಳ್ಳಂಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಸೋಮೆಯಂಡ ಪರ ಅಪ್ಪಚ್ಚು (15ನಿ.32ನಿ), ಅಪ್ಪಯ್ಯ(39ನಿ), ಬೊಳ್ಳಂಡ ಪರ ನಿರನ್ (8ನಿ), ಮುತ್ತಣ್ಣ (28ನಿ) ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.