ವೀರಾಜಪೇಟೆ: ವೀರಾಜಪೇಟೆ ಬಳಿಯ ಕೋಟೆಕೊಪ್ಪಲಿನ ಪೊದುಕೋಟೆಯ ವೆಂಕಟೇಶ್ವರ ಹಾಗೂ ಕನ್ನಂಬಾಡಮ್ಮ ಉತ್ಸವವು ತಾ. 4 ಹಾಗೂ 5 ರಂದು ನಡೆಯಲಿದೆ.

ತಾ. 4 ರಂದು ರಾತ್ರಿ ದೇವರಿಗೆ ಹರಿಸೇವೆ, 5 ರಂದು ಅಪರಾಹ್ನ 12 ಗಂಟೆಗೆ ಮಹಾ ಪೂಜಾ ಸೇವೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿ.ಎಲ್. ಸುರೇಶ್ ತಿಳಿಸಿದ್ದಾರೆ.

ಅಪ್ಪಯ್ಯ ಸ್ವಾಮಿ ಜನ್ಮೋತ್ಸವ

ವೀರಾಜಪೇಟೆ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಅವರ 134ನೇ ಜಯಂತಿ ಉತ್ಸವ ತಾ. 2 ರಂದು ನಡೆಯಲಿದೆ. ಶ್ರೀ ಕಾವೇರಿ ಆಶ್ರಮದ ಸಂಸ್ಥಾಪಕರಾಗಿರುವ ಸದ್ಗುರು ಜಯಂತಿ ಪ್ರಯುಕ್ತ ಅಂದು ಬೆಳಿಗ್ಗೆ 7 ಗಂಟೆಗೆ ಷೋಡಘೋಪಚಾರ ಪೂಜೆ, ಅಷ್ಟೋತ್ತರ, ಸಭಾ ಕಾರ್ಯಕ್ರಮದೊಂದಿಗೆ ಮಹಾ ಮಂಗಳಾರತಿ, ಪ್ರಸಾದ, ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಶ್ರೀ ವಿವೇಕಾನಂದ ಶರಣ ಸ್ವಾಮೀಜಿ ತಿಳಿಸಿದ್ದಾರೆ.

ಈಶ್ವರ ಉತ್ಸವ

ಸುಂಟಿಕೊಪ್ಪ ಸಮೀಪದ ನೇಗದಾಳು ಶ್ರೀ ಮಹಾದೇವ ಈಶ್ವರ ವಾರ್ಷಿಕೋತ್ಸವ ತಾ. 21 ರಂದು ಜರುಗಲಿದೆ. ಬೆಳಿಗ್ಗೆ 9 ಗಂಟೆಯಿಂದ ದೇವತಾ ಕಾರ್ಯ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆಗಳೊಂದಿಗೆ ಅನ್ನಸಂತರ್ಪಣೆ ನೆರವೇರಲಿದೆ.

ನೇರುಗಳಲೆ ಪೂಜೋತ್ಸವ

ಸೋಮವಾರಪೇಟೆ ಸಮೀಪದ ನೇರುಗಳಲೆ ಗ್ರಾಮದ ಶ್ರೀ ಶಾಂತಲಿಂಗೇಶ್ವರ ಮತ್ತು ಕನ್ನಂಬಾಡಿಯಮ್ಮ ದೇವರ ವಾರ್ಷಿಕ ಮಹಾಪೂಜೋತ್ಸವ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವಿರೂಪಾಕ್ಷ ಪೌರೋಹಿತ್ಯದಲ್ಲಿ ಅಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿದವು. ಭಕ್ತಾದಿಗಳಿಗೆ ಅನ್ನದಾನ ನಡೆಯಿತು. ಪೂಜಾ ಕಾರ್ಯಕ್ರಮಗಳಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ. ಪ್ರಭಾಕರ್, ಉಪಾಧ್ಯಕ್ಷ ಗಿರೀಶ್ ಮಲ್ಲಪ್ಪ, ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಪೂಜೋತ್ಸವಕ್ಕೆ ಸಹಕರಿಸಿದ ಹರಪಳ್ಳಿ ರವೀಂದ್ರ, ಗಿರೀಶ್ ಮಲ್ಲಪ್ಪ, ಪುಟ್ಟಣ್ಣ, ಉದಯಕುಮಾರ್, ಜೋಯಪ್ಪ, ಮದನ್, ಕೌಶಿಕ್, ಯೂನಸ್ ಅವರುಗಳನ್ನು ಸನ್ಮಾನಿಸಲಾಯಿತು.