ಸುಂಟಿಕೊಪ್ಪ, ಮೇ 3: ಪ್ರತಿಯೊಬ್ಬರು ತಮ್ಮ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದ ಹಾಗೆ ನೋಡಿಕೊಳ್ಳಬೇಕು ಇದರಿಂದ ಮನುಷ್ಯನಿಗೆ ಹರಡುವ ವಿವಿಧ ರೀತಿಯ ಕಾಯಿಲೆಗಳು ಬಾರದಂತೆ ನಿಯಂತ್ರಿಸಲು ಸಾಧ್ಯ ಎಂದು ವೈದ್ಯಾಧಿಕಾರಿ ಡಾ. ಜೀವನ್ ಹೇಳಿದರು.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆದ ಮಲೇರಿಯ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ರೋಗ ಹರಡುತ್ತದೆ. ಸೊಳ್ಳೆ ಕಚ್ಚುವದು ಸಾಮಾನ್ಯ ಎಂದು ಯಾರೂ ತಿಳಿಯಬಾರದು. ಸೊಳ್ಳೆ ಕಡಿತಗೊಳಗಾದವರು ರಕ್ತ ಪರೀಕ್ಷೆ ಮಾಡಿಸಿ ವೈದ್ಯರಿಂದ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಪಡೆದು ಮುಂದಾಗುವ ಅನಾಹುತದಿಂದ ಪಾರಾಗಬಹುದು ಎಂದರು.
ಈ ಸಂದರ್ಭ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಟಿ. ಚಂದ್ರಮ್ಮ, ಪ್ರಯೋಗ ಶಾಲಾ ತಂತ್ರಜ್ಞೆ ಸುಧಾ ಎಂ.ಎಂ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಹಾಜರಿದ್ದರು.