ನಾಪೆÉÇೀಕ್ಲು, ಮೇ 4: ಕೊಡಗು ಜಿಲ್ಲಾ ಗೊಲ್ಲ ಸಮಾಜದ ಆಶ್ರಯದಲ್ಲಿ ಗೊಲ್ಲ ಯುವ ವೇದಿಕೆ ವತಿಯಿಂದ ನಾಪೆÉÇೀಕ್ಲು ಸಮೀಪದ ಚೆರಿಯ ಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿರುವ ಎರಡು ದಿನದ ಕ್ರಿಕೆಟ್ ಪಂದ್ಯಾಟಕ್ಕೆ ಕ್ರೀಡಾ ಸಮಿತಿಯ ಅಧ್ಯಕ್ಷ ಕಡವಡೀರ ಸಂತೋಷ್ ಬ್ಯಾಟಿಂಗ್ ಮಾಡುವದರ ಮೂಲಕ ಚಾಲನೆ ನೀಡಿದರು.ನಂತರ ನಡೆದ ಸಭೆಯಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬಲ್ಲಮಾವಟಿ ಗ್ರಾ.ಪಂ. ಮಾಜಿ ಸದಸ್ಯ ಮತ್ತು ಗೊಲ್ಲ ಸಮಾಜದ ಪ್ರಧಾನ ಕಾರ್ಯದರ್ಶಿ ಚೋಕಿರ ವಾಸುದೇವ್ ಮಾದಪ್ಪ ಮಾತನಾಡಿ ಕೊಡಗು ಗೊಲ್ಲ ಸಮಾಜದ ಕ್ರೀಡಾ ಕೂಟವನ್ನು ಮೊದಲನೇ ಬಾರಿಗೆ ತೆಕ್ಕಡ ನಾಗೇಶ್ ಮತ್ತು ಅವರ ಸಹೋದರ ಸಾಬು ವಾಲಿಬಾಲ್ ಪಂದ್ಯಾಟ ನಡೆಸುವದರ ಮೂಲಕ ಪ್ರಾರಂಭಿಸಿದರು. ಅದು ಬೆಳೆದು ಇಂದಿಗೆ ಸುಮಾರು 14 ವರ್ಷಗಳು ಆಗಿದ್ದು; ಅಂದಿನಿಂದ ನಿರಂತರವಾಗಿ ನಮ್ಮ ಜನಾಂಗದವರು ವಾರ್ಷಿಕವಾಗಿ ಈ ಕ್ರೀಡಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತೇವೆ ಎಂದರು. ಯಾವದೇ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಮುಖ್ಯವಾಗಿ ಆರ್ಥಿಕ ನೆರವು ಅಗತ್ಯವಿದ್ದು, ಜನಾಂಗ ಬಾಂಧವರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವದರಿಂದ ಇಂತಹ ಕ್ರೀಡೆಯನ್ನು ಆಯೋಜಿಸಲು ಸಾಧ್ಯ ಎಂದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಡವಡೀರ ಸಂತೋಷ್ ನಮ್ಮ ಜನಾಂಗದ ಮಕ್ಕಳು ಓದಿನಂತೆಯೇ ಮೊದಲ ಪುಟದಿಂದ) ಕ್ರೀಡೆ ಯಲ್ಲಿಯೂ ಮುಂದೆ ಬರುವ ಉದ್ದೇಶದಿಂದ ನಮ್ಮ ಸಮಾಜ ವಾರ್ಷಿಕವಾಗಿ ಇಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇದಕ್ಕೆ ಸರ್ವರೂ ಸಹಕಾರ ನೀಡ ಬೇಕೆಂದರು. ಕಾರ್ಯಕ್ರಮದಲ್ಲಿ ಸಮಾಜದ ಆಚೀರ ನಾಣಯ್ಯ, ಉಪಾಧ್ಯಕ್ಷ ಅರೆಯಂಡ ಜಿ. ಕುಶಾಲಪ್ಪ, ಕಾರ್ಯ ದರ್ಶಿ ತೊತ್ತಿಯಂಡ ಕಿರಣ್ ಇದ್ದರು.

ಉದ್ಘಾಟನಾ ಪಂದ್ಯವು ಕೋಡಿಯಂಡ ಎ. ಪೇರೂರ್ ಮತ್ತು ಪೈತಾಡಿಯಂಡ ಬೆಂಗೂರ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಪೈತಾಡಿಯಂಡ ತಂಡ 6 ಓವರ್‍ಗಳಿಗೆ 49 ರನ್ ಗಳಿಸಿದರೆ ಇದನ್ನು ಬೇಧಿಸಿದ ಕೋಡಿಯಂಡ ಎ ತಂಡವು 50 ರನ್ ಗಳಿಸಿ ವಿಜಯ ಸಾಧಿಸಿತು. -ದುಗ್ಗಳ