ನಾಪೋಕ್ಲು, ಮೇ 4: ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎ.ಯು. ಗ್ರೀಷ್ಮ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಈಕೆ ಕರಾಟೆ ತರಬೇತುದಾರ ಶೀಯಾವ್ ಪ್ರತಿಭನ್ ಮತ್ತು ಸೆನಸಾಯಿ ಚಂದ್ರನ್ ಅವರ ಶಿಷ್ಯೆಯಾಗಿದ್ದು ನಾಪೋಕ್ಲುವಿನ ಬೇತು ಗ್ರಾಮದ ಉಮೇಶ್ ಮತ್ತು ಮಾಚಮ್ಮ ದಂಪತಿಯ ಪುತ್ರಿ.