ಕಾಕೋಟುಪರಂಬು (ವೀರಾಜಪೇಟೆ), ಮೇ 2: ಬಿಟ್ಟಂಗಾಲದ ತಂಗಾಳಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕಂಜಿತಂಡ ಕಪ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲಿ 15 ತಂಡಗಳು ಮುನ್ನಡೆ ಸಾಧಿಸಿತು.

ಗುಡ್ಡಂಡ ತಂಡ ತಾತಪಂಡ ತಂಡವನ್ನು, ಚೊಟ್ಟಂಡ ತಂಡ ಅಪ್ಪಚ್ಚಿರ ತಂಡವನ್ನು, ಮೇವಡ ತಂಡ ಕಡೇಮಾಡ ತಂಡವನ್ನು, ಅಮ್ಮಣಿಚಂಡ ತಂಡ ನಾಮೇರ ತಂಡವನ್ನು, ಕಾಳಿಮಾಡ ತಂಡ ನಾಟೋಳಂಡ ತಂಡವನ್ನು, ಕೇಟೋಳಿರ ತಂಡ ಕಾಳೇಂಗಡ ತಂಡವನ್ನು, ಪುದಿಯೊಕ್ಕಡ ತಂಡ ಚೋಟ್ಟೆಯಾಂಡ ಮಾಡ ತಂಡವನ್ನು, ಬೊಳ್ತಂಡ ತಂಡ ಬೊಳಿಯಾಡಿರ ತಂಡವನ್ನು, ಚೇಂದ್ರಿಮಾಡ ತಂಡ ಕುಂಬೇರ ತಂಡವನ್ನು, ಪಟ್ಟಚೆರವಂಡ ತಂಡ ಪುಟ್ಟಿಚಂಡ ತಂಡವನ್ನು, ಪಟ್ಟಡ ತಂಡ ಚೀಕಂಡ ತಂಡವನ್ನು ಚೌರಿರ ತಂಡ ಬಿದ್ದಮಾಡ ತಂಡವನ್ನು, ಶಿವಚಾಳಿಯಂಡ ತಂಡ ಮಳವಂಡ ತಂಡವನ್ನು, ಅರೆಯಡ ತಂಡ ಬಡುವಂಡ ತಂಡವನ್ನು ಅಡ್ಡೆಂಗಡ ತಂಡ ಕುಟ್ಟೇಟ್ಟಿರ ತಂಡವನ್ನು ಮಣಿಸಿ ಮುಂದಿನ ಸುತ್ತಿನ ಪ್ರವೇಶ ಪಡೆದುಕೊಂಡಿದೆ.