ಗೋಣಿಕೊಪ್ಪ ವರದಿ, ಮೇ 2 : ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯುತ್ತಿರುವ 18 ನೇ ವರ್ಷದ ಹೆಗ್ಗಡೆ ಸಮಾಜ ಕ್ರಿಕೆಟ್ ಕ್ರೀಡಾಕೂಟದಲ್ಲಿ ಕಡಿಯತ್ತೂರು (ಎ), ಹಾಲುಗುಂದ, ಬೆಟ್ಟಗೇರಿ (ಬಿ) ಹಾಗೂ ಪಾರಾಣೆ (ಸಿ) ತಂಡಗಳು ಸೆಮಿ ಫೈನಲ್‍ಗೆ ಲಗ್ಗೆ ಇಟ್ಟಿವೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ 4 ತಂಡಗಳು ಸೆಮಿಗೆ ಪ್ರವೇಶ ಪಡೆದವು.

ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಕಡಿಯತ್ತೂರು (ಎ) ತಂಡವು ಹಾತೂರು (ಬಿ) ವಿರುದ್ಧ 9 ವಿಕೆಟ್‍ಗಳ ಗೆಲವು ದಾಖಲಿಸಿತು. ಹಾತೂರು ತಂಡವು ನಿಗದಿತ 8 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 45 ರನ್ ಪೇರಿಸಿತು. ಬೆನ್ನೆತ್ತಿದ ಕಡಿಯತ್ತೂರು 1 ವಿಕೆಟ್ ಕಳೆದುಕೊಂಡು 4 ಓವರ್‍ಗಳಲ್ಲಿ ಗುರಿ ಸಾಧಿಸಿತು.

2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲುಗುಂದ ತಂಡವು ಪೊನ್ನಂಪೇಟೆ (ಬಿ) ತಂಡವನ್ನು 10 ವಿಕೆಟ್‍ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಪೊನ್ನಂಪೇಟೆ ತಂಡ 4 ವಿಕೆಟ್‍ಗೆ 31 ರನ್ ಗಳಿಸಿತು. ಹಾಲುಗುಂದ ತಂಡವು ವಿಕೆಟ್ ನಷ್ಟವಿಲ್ಲದೆ 4 ಓವರ್‍ಗಳಲ್ಲಿ ಗುರಿ ಸಾಧನೆ ಮಾಡಿತು.

3ನೆ ಕ್ವಾರ್ಟರ್ ಫೈನಲ್‍ನಲ್ಲಿ ಬೆಟ್ಟಗೇರಿ (ಬಿ) ತಂಡವು ಒಂಟಿಯಂಗಡಿ (ಬಿ) ವಿರುದ್ಧ 18 ರನ್‍ಗಳ ಜಯ ಸಾಧಿಸಿತು. ಬೆಟ್ಟಗೇರಿ 3 ವಿಕೆಟ್ ನಷ್ಟಕ್ಕೆ 70 ರನ್‍ಗಳ ಗುರಿ ನೀಡಿತು. ಒಂಟಿಯಂಗಡಿ 3 ವಿಕೆಟ್‍ಗೆ 51 ರನ್ ಗಳಿಸಿ ಸೋಲೊಪ್ಪಿಕೊಂಡಿತು.

4ನೇ ಕ್ವಾರ್ಟರ್ ಫೈನಲ್‍ನಲ್ಲಿ ಪಾರಾಣೆ (ಸಿ) ತಂಡವು ಹಾತೂರು (ಎ) ವಿರುದ್ಧ 5 ರನ್‍ಗಳಿಂದ ಜಯ ಸಾಧನೆ ಮಾಡಿತು. ಪಾರಾಣೆ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ಹಾತೂರು ತಂಡವು 5 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಸೋಲೊಪ್ಪಿ ಕೊಂಡಿತು. ತಾ. 3 ರಂದು (ಇಂದು) ಸೆಮಿ ಹಾಗೂ ಫೈನಲ್ ನಡೆಯಲಿದೆ.