ಚೆಟ್ಟಳ್ಳಿ, ಮೇ 2: ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ಕೆ.ವೈ.ಸಿ ಕೊಂಡಂಗೇರಿ ಇವರ ವತಿಯಿಂದ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಬಲಿಷ್ಠ ಅಮ್ಮತ್ತಿ ಎಫ್.ಸಿ. ತಂಡವನ್ನು ಕ್ವಾರ್ಟರ್ ಫೈನಲ್‍ನಲ್ಲಿ ಮಣಿಸಿ ರೋಜಾರಿಯನ್ಸ್ ಗೋಣಿಕೊಪ್ಪ ಸೆಮಿಫೈನಲ್‍ಗೆ ಪ್ರವೇಶಿಸಿದೆ.ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮ್ಮತ್ತಿ ಎಫ್.ಸಿ ತಂಡವು ಫ್ಯಾನ್ಸಿ ಕಂಡಕರೆ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 3-2 ಗೋಲುಗಳ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿತು.

ಸೆಮಿಫೈನಲ್ಗೆ ಅರ್ಹತೆ ಪಡೆದ ರೋಜಾರಿಯನ್ಸ್ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಲ್ಲುಮೊಟ್ಟೆ ತಂಡ ವನ್ನು ಮಣಿಸಿ ಕ್ವಾರ್ಟಗೆ ಪ್ರವೇಶಿಸಿತು.

ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ಹಾಗೂ ಮಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಸುಂಟಿಕೊಪ್ಪ ತಂಡವು 4-0 ಗೋಲುಗಳ ಅಂತರದಿಂದ ಗೆದ್ದಿತು.

ಕೆ.ಎಫ್.ಸಿ ಕುಶಾಲನಗರ ಹಾಗೂ ಎಫ್.ಸಿ ಗೋಣಿಕೊಪ್ಪ ನಡುವಿನ ಪಂದ್ಯದ ಕುಶಾಲನಗರ ತಂಡವು 5-0 ಗೋಲುಗಳ ಅಂತರದಿಂದ ಗೆದ್ದಿತು.

ಸೆಡ್ ವೈ.ಸಿ ಕೊಟ್ಟಮುಡಿ ಹಾಗೂ ಪಾಲಿಬೆಟ್ಟ ನಡುವಿನ ಪಂದ್ಯಾಟದಲ್ಲಿ ಕೊಟ್ಟಮುಡಿ ತಂಡವು ಪೆನಾಲ್ಟಿ ಶೂಟೌಟ್‍ನಲ್ಲಿ 4-3 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ಲಕ್ಕಿ ಬ್ರದರ್ಸ್ ಕುಂಜಿಲ ಹಾಗೂ ಅಮ್ಮತ್ತಿ ಎಫ್.ಸಿ ಬಿ ತಂಡಗಳ ನಡುವಿನ ಪಂದ್ಯದಲ್ಲಿ ಕುಂಜಿಲ ತಂಡವು 2-0 ಗೋಲುಗಳ ಅಂತರದಿಂದ ಗೆಲವು ಕಂಡಿತು.