ಗೋಣಿಕೊಪ್ಪಲು, ಮೇ 2: ಸಮಾಜದಲ್ಲಿನ ಹೊಸ ಪ್ರತಿಭೆಗಳು ಎಲ್ಲಾ ರಂಗದಲ್ಲೂ ಹೊರ ಹೊಮ್ಮಲು ಸಮಾಜವೂ ಉತ್ತಮ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕೆಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಪಡಿಜ್ಞರಂಡ ಜಿ.ಚಂಗಪ್ಪ ಹೇಳಿದರು. ಹಾತೂರು ಎಂ.ಎಂ.ಸಿ. ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 18ನೇ ವರ್ಷದ ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟದ ಮೂಲಕ ಸಮಾಜ ಭಾಂದವರನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಹೆಗ್ಗಡೆ ಸಮಾಜ ಯಶಸ್ವಿಯಾಗಿದೆ. ಇದರಿಂದ 18 ವರ್ಷ ಪೂರೈಸಲು ಸಾಧ್ಯವಾಗಿದೆ. ಕ್ರೀಡೆಯೊಂದಿಗೆ ತಮ್ಮ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ರೂಪಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪಂದಿಕಂಡ ಗಣಪತಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಭಾಂದವರು ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದು, ಇವರನ್ನು ಸಂಪರ್ಕಿಸಿ ಸಮಾಜದ ಸದಸ್ಯತ್ವ ನೋಂದಾವಣೆ ಮಾಡಬೇಕು. ಕ್ರೀಡೆಯೊಂದಿಗೆ ವಿವಿಧ ಚಟುವಟಿಕೆ ಗಳಿಗೆ ಪ್ರೋತ್ಸಾಹ ನೀಡಬೇಕೆಂದರು. ಸಭೆಯಲ್ಲಿ ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಪ್ರಾಸ್ತವಿಕ ವಾಗಿ ಮಾತನಾಡಿದರು.
(ಮೊದಲ ಪುಟದಿಂದ) ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಜ್ಞರಂಡ ಜಿ. ಅಯ್ಯಪ್ಪ ಕ್ರಿಡೋತ್ಸವವು ಒಗ್ಗಟ್ಟಿನ ಸಂಕೇತವಾಗಿದೆ. ಇನ್ನಷ್ಟು ಪ್ರಮಾಣದಲ್ಲಿ ಒಗ್ಗಟ್ಟಾಗಬೇಕಿದೆ. ವಲಯ ಮಟ್ಟದಿಂದ ಆರಂಭವಾದ ಕ್ರೀಡೋತ್ಸವ ಇಂದು ಬೃಹತ್ ಆಗಿ ಬೆಳೆದಿರುವದು ಒಗ್ಗಟ್ಟಿನ ಫಲ ಎಂದರು. ಪಾನಿಕುಟ್ಟಿರ ಕುಟುಂಬ 18ನೇ ವರ್ಷದ ಕ್ರೀಡೋತ್ಸವದ ಟ್ರೋಫಿ ದಾನಿಗಳಾಗಿದ್ದರು.
ಹಾತೂರು, ಕಡಿಯತ್ತೂರು, ಬಿಟ್ಟಂಗಾಲ, ಪಾರಾಣೆ, ಬೆಟ್ಟಗೇರಿ, ಒಂಟಿಯಂಗಡಿ, ಮೈತಾಡಿ, ಹಾಲುಗುಂದ ವಲಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಮೂರು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ,ಖಜಾಂಜಿ ಪಾನಿಕುಟ್ಟಿರ ರಾಧ ಕುಟ್ಟಪ್ಪ, ನಿರ್ದೇಶಕರಾದ ಮೂರಿರ ಕುಶಾಲಪ್ಪ,ಚರ್ಮಂಡ ಅಪ್ಪುಣು ಪೂವಯ್ಯ,ತೋರೇರ ಟಿ.ಮುದ್ದಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ,ಪೊಕ್ಕಳಿಚಂಡ ರಾಜ ಕಾಳಪ್ಪ, ಪಡಿಜ್ಞರಂಡ ಪ್ರಭುಕುಮಾರ್, ಕೊಂಗೇಪಂಡ ರವಿ,ಚೋವಂಡ ಇಂದಿರಾ ಪೊನ್ನಮ್ಮ,ಮಳ್ಳಡ ಸುತ ಪೂಣಚ್ಚ, ಮೂರೀರ ಶಾಂತಿ, ಕೋಕೇರ ಸನ್ನಿಪಳಂಗಪ್ಪ, ಪಂದಿಕಂಡ ಸುನ,ತಂಬಂಡ ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಕ್ರೀಡೋತ್ಸವದ ಸಂಚಾಲಕ ಪಡಿಜ್ಞರಂಡ ಪ್ರಭುಕುಮಾರ್, ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ ಸ್ವಾಗತಿಸಿದರು.ಕೊಕ್ಕಂಡ ಸ್ನೇಹಾ, ಪ್ರಾರ್ಥಿಸಿದರು. -ಹೆಚ್.ಕೆ.ಜಗದೀಶ್