ಚೆಟ್ಟಳ್ಳಿ, ಮೇ 2: ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ಆಶ್ರಯದಲ್ಲಿ ಕರಡಿಗೋಡಿನ ಕುಕ್ಕನೂರು ಪಿ. ಪುರುಷೋತ್ತಮ ಹಾಗೂ ಜಯರಾಮನ್ ಅವರು ದಾನ ನೀಡಿರುವ ಮೈದಾನದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಕೆ.ಸಿ.ಎಲ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಫೈನಲ್ ಪಂದ್ಯದ ಬ್ಲ್ಯಾಕ್ ವಾರಿಯರ್ಸ್ ತಂಡವನ್ನು ಮಣಿಸಿ ರ್ಯಾಂಬೋ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಬ್ಲ್ಯಾಕ್ ವಾರಿಯರ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಸಂತೋಷ್ ನಾಯಕತ್ವದ ಬ್ಲ್ಯಾಕ್ ವಾರಿಯರ್ಸ್ ತಂಡವು ನಿಗದಿತ 10 ಓವರುಗಳ ಪಂದ್ಯಾಟದಲ್ಲಿ 8.2 ಓವರ್‍ಗ್ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 34 ರನ್ ಗಳಿಸಲಷ್ಟೇ ಶಕ್ತವಾಯಿತು.35 ರನ್‍ಗಳ ಗುರಿಯನ್ನು ಬೆನ್ನಟ್ಟಿದ ರಾಂಬೋ ತಂಡವು ಆರಂಭಿಕ ಆಟಗಾರ; ತಂಡದ ನಾಯಕ ರಿಯಾಸ್ ಹಾಗೂ ಅಲೋಕ್ ಅವರ ಅಮೋಘ ಆಟದ ನೆರವಿನಿಂದ ಯಾವದೇ ವಿಕೆಟ್ ನಷ್ಟವಿಲ್ಲದೇ 3 ಓವರುಗಳಿಗೆ ಗುರಿ ತಲುಪಿ ನಾಲ್ಕನೇ ಆವೃತ್ತಿಯ ಕೆ.ಸಿ.ಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.ಫೈನಲ್ ಪಂದ್ಯಾಟದ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಎ ಹಾಗೂ ಬಿ ಪೂಲ್ ನಿಂದ ಅಗ್ರ ಸ್ಥಾನ ಪಡೆದ ರ್ಯಾಂಬೋ ಕ್ರಿಕೆಟರ್ಸ್ ಹಾಗೂ ಬ್ಲ್ಯಾಕ್ ವಾರಿಯರ್ಸ್ ಬೆಟ್ಟದಕಾಡು ತಂಡಗಳ ನಡುವೆ ನಡೆದ ನಿಗದಿತ 8 ಓವರುಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರ್ಯಾಂಬೋ ತಂಡವು 63 ರನ್ ಗಳಿಸಿದರು.
(ಮೊದಲ ಪುಟದಿಂದ) 64 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಬ್ಲ್ಯಾಕ್ ವಾರಿಯರ್ಸ್ ತಂಡವು ತಂಡದ ಉಪನಾಯಕ ಹುಸೈನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಗೆದ್ದು ಫೈನಲ್ಗೆ ನೇರ ಅರ್ಹತೆ ಪಡೆದುಕೊಂಡಿತು.
ಎ ಮತ್ತು ಬಿ ಪೂಲ್‍ನ ಎರಡನೇ ಸ್ಥಾನ ಪಡೆದಿದ್ದ ಝಲ್ಲಾ ಕ್ರಿಕೆಟರ್ಸ್ ಹಾಗೂ ಎಸ್.ಆರ್. ಎಸ್.ಮೂರ್ನಾಡು ನಡುವಿನ ಪಂದ್ಯದಲ್ಲಿ ಮೂರ್ನಾಡು ತಂಡವು ಗೆದ್ದು ಫೈನಲ್ಗೆ ನಡೆಯುವ ಅರ್ಹತಾ ಸುತ್ತಿಗೆ ಆಯ್ಕೆಯಾಗಿತ್ತು.
ಅಗ್ರ ಸ್ಥಾನದಲ್ಲಿ ನಡೆದ ಸೆಣಸಾಟದಲ್ಲಿ ಸೋಲು ಕಂಡ ರ್ಯಾಂಬೋ ತಂಡ ಹಾಗೂ ಎಸ್.ಆರ್.ಎಸ್. ಮೂರ್ನಾಡು ತಂಡಗಳ ನಡುವಿನ ಪಂದ್ಯದಲ್ಲಿ ರ್ಯಾಂಬೋ ತಂಡವು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ರ್ಯಾಂಬೋ ಕ್ರಿಕೆಟರ್ಸ್ ತಂಡದ ರಿಯಾಸ್ ಪಡೆದುಕೊಂಡರು.
ಕೆಸಿಎಲ್ ನಾಲ್ಕನೇ ಆವೃತ್ತಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರ್ಯಾಂಬೋ ಕ್ರಿಕೆಟರ್ಸ್ ತಂಡದ ನಾಯಕ ರಿಯಾಸ್, ಉತ್ತಮ ಶಿಸ್ತಿನ ನಾಯಕ ಫೈಯರ್ ಟೈಗರ್ಸ್ ತಂಡದ ನಾಯಕ ರೋನಿತ್, ಉತ್ತಮ ಬೌಲರ್ ರ್ಯಾಂಬೋ ತಂಡದ ನಿಶಾದ್, ಉತ್ತಮ ಬ್ಯಾಟ್ಸ್‍ಮನ್ ಬ್ಲಾಕ್ ವಾರಿಯರ್ಸ್ ತಂಡದ ಹುಸೈನ್, ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರ್ಯಾಂಬೋ ತಂಡದ ರಿಯಾಸ್, ಉತ್ತಮ ಫೀಲ್ಡರ್ ಫೈಯರ್ ಟೈಗರ್ಸ್ ತಂಡದ ಅಶ್ವಥ್, ಉತ್ತಮ ತಂಡ ರಾಯಲ್ ಕುಕ್ಕುನೂರು, ಉದಯೋನ್ಮುಖ ಆಟಗಾರ ಎಸ್‍ಆರೆಸ್ ತಂಡದ ಅಫ್ನಾಸ್, ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ರ್ಯಾಂಬೋ ತಂಡದ ರಿಯಾಸ್ ಪ್ರಶಸ್ತಿಗಳನ್ನು ಪಡೆದು ಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪಾಲಿಬೆಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಕಳೆದ ಒಂದು ವಾರದಿಂದ ಸಿಟಿ ಬಾಯ್ಸ್ ಯುವಕ ಸಂಘ ಬಹಳ ಯಶಸ್ವಿಯಾದ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವದು ಶ್ಲಾಘನೀಯ ವಿಷಯವಾಗಿದೆ ಎಂದರು.
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಕ್ರೀಡಾಕೂಟಗಳು ನಡೆಯುತ್ತದೆ ಎಂಬದನ್ನು ಈ ಕೆ.ಸಿ.ಎಲ್. ಕ್ರೀಡಾಕೂಟದ ಮೂಲಕ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆ.ಸಿ.ಎಲ್. ಕ್ರೀಡಾಕೂಟವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.
ಕೆ.ಸಿ.ಎಲ್. ಕ್ರೀಡಾಕೂಟದ ಪ್ರಾಯೋಜಕರಾಗಿರುವ ಮೈಲೈಫ್ ಸ್ಟೈಲ್ ಶರ್ಫುದ್ದೀನ್ ಮಾತನಾಡಿ ಕಳೆದ ಒಂದು ತಿಂಗಳುಗಳಿಂದ ಸಿ.ಟಿ ಬಾಯ್ಸ್ ಯುವಕ ಸಂಘದ ಸದಸ್ಯರು ಸೇರಿ ಅಚ್ಚುಕಟ್ಟಾದ ಮೈದಾನವನ್ನು ನಿರ್ಮಿಸಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಒಳ್ಳೆಯ ಮನಸ್ಸಿದ್ದರೆ ಎಲ್ಲವನ್ನೂ ಸಾಧಿಸಬಹುದು ಎಂಬದಕ್ಕೆ ಈ ಕೆ.ಸಿ.ಎಲ್. ಕ್ರೀಡಾಕೂಟವೆ ಸಾಕ್ಷಿ ಎಂದರು.
ಎಲ್ಲರನ್ನೂ ಒಂದು ವೇದಿಕೆಗೆ ತರುವಂತಹ ಸಾಮಥ್ರ್ಯವಿರುವದು ಕ್ರೀಡೆಗೆ ಮಾತ್ರ. ಕ್ರೀಡೆಯಲ್ಲಿ, ಜಾತಿ, ಧರ್ಮವಿರಬಾರದು ಎಂದರು.
ಕಲುಷಿತ ಮನಸ್ಸು ಇರುವವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಕ್ರೀಡಾಕೂಟದೊಳಗೆ ಜಾತಿ ಧರ್ಮವನ್ನು ತರಬಾರದು ಎಂದರು.
ಈ ಸಂದರ್ಭ ಕುಕ್ಕನೂರು ಪಿ. ಪುರುಷೋತ್ತಮ. ಸುನಿಲ್, ದೇವಪ್ರಕಾಶ್, ಜಯರಾಮ್, ಕ್ರಿಯೇಟಿವ್ ಖಲೀಲ್, ಟಿಂಬರ್ ಮರ್ಚೆಂಟ್ ಜುಬೈರ್, ಸಿದ್ದಾಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಕೊಡಗು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷೆ ಸವಿತಾ ರೈ, ಮೈಲ್ ಸ್ಟೈಲ್ ಸಮೀರ್, ರಂಶಾದ್, ಅನಿಲ್, ಪ್ರದೀಪ್, ಶಮ್ಮು ಗೋಣಿಕೊಪ್ಪ, ರುಕ್ಮಿಣಿ, ದೇವಯಾನಿ, ಅಶ್ರಫ್, ಮತ್ತಿತ್ತರರು ಇದ್ದರು.
ಪತ್ರಕರ್ತರಾದ ಕಿಶೋರ್ ರೈ ಕತ್ತಲೆ ಕಾಡು, ವಿಘ್ನೇಶ್ ಭೂತನಕಾಡು, ಕುಕ್ಕನೂರು ಕುಟುಂಬಸ್ಥರಾದ ಕಳೆದ ಹಲವಾರು ವರ್ಷಗಳ ಕಾಲ ಭಾರತೀಯ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಜಯರಾಮ್ ಹಾಗೂ ಪತ್ರಕರ್ತರಾದ ವಾಸು , ಮುಬಾರಕ್ ಅವರನ್ನು ಕೆ.ಸಿ.ಎಲ್. ಫೈನಲ್ ಪಂದ್ಯಾಟದ ಸಮಾರೋಪ ಸಮಾರಂಭದ ವೇಳೆ ಸನ್ಮಾನಿಸಲಾಯಿತು.
-ಕೆ.ಎಂ ಇಸ್ಮಾಯಿಲ್, ಕಂಡಕರೆ, ಎ.ಎನ್. ವಾಸು