ಚೆಟ್ಟಳ್ಳಿ, ಏ. 30: ಸಮೀಪದ ಕೊಂಡಂಗೇರಿ ಯೂತ್ ಕ್ಲಬ್ ವತಿಯಿಂದ ಕೊಂಡಂಗೇರಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ಪಂದ್ಯಾಟದಲ್ಲಿ ಹಾಕತ್ತೂರು ಎಫ್.ಸಿ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಕ್ರೀಡಾಕೂಟದ ಮೊದಲ ತಂಡವಾಗಿ ಸೆಮಿಫೈನಲ್‍ಗೆ ಅರ್ಹತೆ ಪಡೆದಿದೆ.

ಚೆಲ್ಸಿ ಗೋಣಿಕೊಪ್ಪ ಹಾಗೂ ಅಲ್ ಅಮೀನ್ ಹಳೇ ತಾಲೂಕು ನಡುವಿನ ಪಂದ್ಯಾಟದಲ್ಲಿ ಗೋಣಿಕೊಪ್ಪ ತಂಡವು 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದಿದೆ. ಯೂತ್ ಫಾರ್ ಜಸ್ಟೀಸ್ ಸುಂಟಿಕೊಪ್ಪ ಹಾಗೂ ಚಾಮಿಯಾಲ್ ತಂಡಗಳ ನಡುವಿನ ಪಂದ್ಯಾಟವು ಡ್ರಾ ಆದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಪೆನಾಲ್ಟಿ ಶೂಟೌಟ್ ನಲ್ಲಿ ಚಾಮಿಯಾಲ್ ತಂಡವು 3-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿತು.ಯಂಗ್ ಇಂಡಿಯಾ ಪಾಲಿಬೆಟ್ಟ ಹಾಗೂ ಕಡಂಗ ತಂಡಗಳ ಪಂದ್ಯಾಟದಲ್ಲಿ ಯಂಗ್ ಇಂಡಿಯಾ ತಂಡವು 3-1 ಗೋಲುಗಳ ಅಂತರದಿಂದ ಗೆದ್ದಿತು.

ಕಲ್ಲುಬಾಣೆ ಹಾಗೂ ಯುನೈಟೆಡ್ ಕುಂಜಿಲ ನಡುವಿನ ಪಂದ್ಯಾಟವು 1-1 ಗೋಲುಗಳ ಸಮಬಲ ಸಾಧಿಸದ ಕಾರಣ ಪೆನಾಲ್ಟಿ ಶೂಟೌಟ್ ನಲ್ಲಿ ಕುಂಜಿಲ ತಂಡವು 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದಿದೆ. ಚಿಟ್ಟಡೆ ಎಫ್.ಸಿ ಹಾಗೂ ಎಲಿಯಂಗಾಡು ಫ್ರೆಂಡ್ಸ್ ನಡುವಿನ ಪಂದ್ಯದಲ್ಲಿ ಚಿಟ್ಟಡೆ ತಂಡವು 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಟೀಂ ಕೂಲ್ ಸಿದ್ದಾಪುರ ಹಾಗೂ ಚೆಲ್ಸಿ ಗೋಣಿಕೊಪ್ಪ ತಂಡವು 2-1 ಗೋಲುಗಳ ಅಂತರದಿಂದ ಗೆದ್ದಿತು. ಚಿಟ್ಟಡೆ ಎಫ್.ಸಿ ಹಾಗೂ ಪಡಿಯಾನಿ ಎಫ್.ಸಿ.ನಡುವಿನ ಪಂದ್ಯಾಟದಲ್ಲಿ ಪಡಿಯಾನಿ ತಂಡವು 2-0 ಗೋಲುಗಳ ಅಂತರದಿಂದ ಗೆದ್ದಿತು.

-ಕೆ.ಎಂ ಇಸ್ಮಾಯಿಲ್ ಕಂಡಕರೆ