ಕಾಕೋಟುಪರಂಬು (ವೀರಾಜಪೇಟೆ), ಏ. 30: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಡಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ನಾಕೌಟ್ ಹಾಕಿ ಪಂದ್ಯಾವಳಿಯಲ್ಲಿ ಸಣ್ಣುವಂಡ, ಕಾಂಡೇರ, ಚೇಂದಿರ, ಬೊಳ್ಳಂಡ, ಚೆಕ್ಕೆರ, ಮಂಡಿರ, ತೀತಮಾಡ ಕಾಳೇಂಗಡ, ಕೋಟೇರ ತಂಡಗಳು ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡಿವೆ. ಒಲಂಪಿಯನ್ ಸಣ್ಣುವಂಡ ಉತ್ತಪ್ಪ ಹ್ಯಾಟ್ರಿಕ್ ಸಾಧನೆ ಮಾಡಿದರು.
ಮ್ಯೆದಾನ 1 ರಲ್ಲಿ ನಡೆದ ಪಂದ್ಯಾಟದಲ್ಲಿ ಸಣ್ಣುವಂಡ ತಂಡವು ಚಂಗುಲಂಡ ತಂಡವನ್ನು 4-2 ಗೋಲುಗಳಿಂದ ಪರಾಭವಗೊಳಿಸಿತು. ಸಣ್ಣುವಂಡ ಪರ ಒಲಂಪಿಯನ್ ಉತ್ತಪ್ಪ( 11,18,26,35ನಿ)ದಲ್ಲಿ ಗೋಲು ಬಾರಿಸಿದರು. ಕಾಂಡೇರ ತಂಡ 2-0 ಗೋಲುಗಳಿಂದ ಕರವಂಡ ತಂಡವನ್ನು ಸೋಲಿಸಿತು. ಕಾಂಡೇರ ಪರ ರಜತ್ (16ನಿ), ಪೊನ್ನಣ್ಣ (32ನಿ)ದಲ್ಲಿ ಗೋಲು ಹೊಡೆದರು.
ಚೇಂದಿರ ತಂಡ 4-1 ಗೋಲುಗಳಿಂದ ಕಂಬೇಯಂಡ ತಂಡವನ್ನು ಮಣಿಸಿತು. ಚೇಂದಿರ ಪರ ಡ್ಯಾನಿ(8ನಿ), ಪುನೀತ್(10,40ನಿ), ಪೊನ್ನಣ್ಣ(32ನಿ), ಕಂಬೇಯಂಡ ಪರ ಬೋಜಣ್ಣ(15ನಿ)ದಲ್ಲಿ ಗೋಲು ಗಳಿಸಿದರು. ಬೊಳ್ಳಂಡ ತಂಡ ಮಾರ್ಚಂಡ ತಂಡವನ್ನು 3-2 ಗೋಲುಗಳಿಂದ ಮಣಿಸಿತು. ಬೊಳ್ಳಂಡ ಪರ ಕಾವೇರಪ್ಪ(19ನಿ), ನಿರನ್(32,37ನಿ), ಮಾರ್ಚಂಡ ಪರ ಸೋಮಣ್ಣ(14ನಿ), ಪಳಂಗಪ್ಪ(36ನಿ)ದಲ್ಲಿ ಗೋಲು ಗಳಿಸಿದರು. ಚೆಕ್ಕೆರ ತಂಡ 2-1 ಗೋಲುಗಳಿಂದ ಚೆರುವಾಳಂಡ ತಂಡವನ್ನು ಪರಾಭವಗೊಳಿಸಿತು. ಚೆಕ್ಕೆರ ಪರ ಆದರ್ಶ್(23ನಿ), ಪೆಮ್ಮಯ್ಯ(23ನಿ), ಚೆರುವಾಳಂಡ ಪರ ಜೋಯಪ್ಪ(40ನಿ)ದಲ್ಲಿ ಗೋಲು ಬಾರಿಸಿದರು.
ಮಂಡಿರ(ನೆಲಜಿ) ತಂಡವು 5-2 ಗೋಲುಗಳಿಂದ ಅನ್ನಡಿಯಂಡ ತಂಡವನ್ನು ಸೋಲಿಸಿತು. ಮಂಡಿರ ಪರ ಶಿಶಿರ್(9ನಿ), ಸುಬ್ರಮಣಿ(15,39ನಿ), ತಶ್ವಿನ್(18ನಿ), ಮೋನೀಶ್(32ನಿ), ಅನ್ನಡಿಯಂಡ ಪರ ಪೊನ್ನಣ್ಣ(30,32ನಿ),ದಲ್ಲಿ ಗೋಲು ಬಾರಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು. ತಿತಮಾಡ ತಂಡ ಚಪ್ಪಂಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ತಿತಮಾಡ ಪರ ಭರತ್(23ನಿ)ದಲ್ಲಿ ಗೋಲು ದಾಖಲಿಸಿದರು.
ಮ್ಯೆದಾನ 2 ರಲ್ಲಿ ನಡೆದ ಪಂದ್ಯಾಟದಲ್ಲಿ ಕಾಳೆಂಗಡ ತಂಡವು 4-1 ಗೋಲುಗಳಿಂದ ಕೊಂಡಿರ ತಂಡವನ್ನು ಪರಾಭವ ಗೊಳಿಸಿತು. ಕಾಳೇಂಗಡ ಪರವಾಗಿ ಮೋನಿಷಾ ಮುತ್ತಮ್ಮ(8,27ನಿ), ಬೋಪಣ್ಣ(9,15ನಿ), ಕೋಂಡಿರ ಪರ ತಮ್ಮಯ್ಯ(39ನಿ)ದಲ್ಲಿ ಗೋಲು ದಾಖಲಿಸಿದರು. ಕೋಟೆರ ತಂಡ 2-1 ಗೋಲುಗಳಿಂದ ಕಾಳಿಮಾಡ ತಂಡವನ್ನು ಮಣಿಸಿತು. ಕೋಟೇರ ಪರ ಭರತ್(30ನಿ), ಚೇತನ್(345ನಿ), ಕಾಳಿಮಾಡ ಪರ ಕುಶಾಲಪ್ಪ(10ನಿ)ದಲ್ಲಿ ಗೋಲು ಬಾರಿಸಿದರು.