ಮಡಿಕೇರಿ, ಏ. 30: ಕೊಂಡಂಗೇರಿಯ ಶಿಫಾ ಕೇಂದ್ರ ಮುಸಾಫರ್ ಖಾನಾದಲ್ಲಿ ಪವಾಡ ಪುರುಷರಾದ ಏರೆವಾಡಿ ಶುಅದಾಕಳ್ ಅವರ ಹೆಸರಿನಲ್ಲಿ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ವಾರ್ಷಿಕ ರಾತೀಬ್ ತಾ. 3 ರಿಂದ 5 ರವರೆಗೆ ನಡೆಯಲಿದೆ. ಈ ಬಾರಿ 32ನೇ ವಾರ್ಷಿಕ ರಾತೀಬ್ ಆಚರಿಸಲಾಗುತ್ತಿದ್ದು, ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಿಫಾ ಕೇಂದ್ರದ ಮುಖ್ಯಸ್ಥ ಸಿ.ಬಿ. ಮುಹಮ್ಮದ್ ಬಾಬಾ ತಿಳಿಸಿದ್ದಾರೆ.