ಸುಂಟಿಕೊಪ್ಪ,ಏ.29: ಮಾದಾಪುರ ರಸ್ತೆಯ ಬಳಿಯಿರುವ ವೃಕ್ಷೋದ್ಭವ ಶ್ರೀ ಶಕ್ತಿ ಮಹಾಗಣಪತಿ ದೇವಸ್ಥಾನದ 14ನೇ ವಾರ್ಷಿಕೋತ್ಸವವು ಮೇ1 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ 8.15 ರಿಂದ 9.30 ರವರೆಗೆ ಗಣಹೋಮ, 9.30 ರಿಂದ 11.30 ನವಗ್ರಹ ಹೋಮ, 11.30 ರಿಂದ ಫಲಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 7.30 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ವಾರ್ಷಿಕ ಪೂಜೆಗೆ ತೆರೆ ಬೀಳಲಿದೆ.