ನಾಪೆÇೀಕ್ಲು, ಏ. 29: ನಾವು ನೆನೆದಂತಾದರೆ ಬದುಕು ಕಷ್ಟವಿಲ್ಲ. ಆದರೆ ಅದು ಪ್ರಕೃತಿಯ, ಪರಮಾತ್ಮನ ಕೈಯಲ್ಲಿದೆ ಎನ್ನುವದು ಅಕ್ಷರಶಃ ಸತ್ಯ. ‘ನಾವೊಂದು ನೆನೆದರೆ ದೈವ ಮತ್ತೊಂದು ನೆನೆಯುತ್ತದೆ’ ಎಂಬುದಕ್ಕೆ ಇದೇ ಉದಾಹರಣೆ. ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿ ರುವ ಮಳೆ ಕೇವಲ ಮೀಟರ್ ದೂರಕ್ಕೆ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ.
ನಾಪೆÇೀಕ್ಲು ಪಟ್ಟಣ, ಬೇತು, ಕೊಳಕೇರಿ, ಕೋಕೇರಿ, ಕಿರುಂದಾಡು, ಮತ್ತಿತರರ ಕಡೆಗಳಲ್ಲಿ ದಾಖಲೆಯ ಆಲಿಕಲ್ಲು ಮಳೆ ಸುರಿದಿದೆ. ಕೆಲವೇ ಕಿ.ಮೀ ಅಂತರದಲ್ಲಿರುವ ಕಕ್ಕಬ್ಬೆ, ಯವಕಪಾಡಿ ಗ್ರಾಮಗಳಿಗೆ ಕಾಫಿ ತೋಟಕ್ಕೆ ಸಾಕಾಗುವಷ್ಟು ಮಳೆಯಾಗಿಲ್ಲ.
ಅತೀವೃಷ್ಟಿ: ಪ್ರಸ್ತುತ ನಾಪೆÇೀಕ್ಲು ವಿಭಾಗಕ್ಕೆ ಭಾರೀ ಪ್ರಮಾಣದ ಆಲಿಕಲ್ಲು ಸೇರಿದಂತೆ 8ರಿಂದ 9 ಇಂಚು ಮಳೆ ಸುರಿದಿದೆ. ಪ್ರತಿ ದಿನ ಸುರಿಯುತ್ತಿರುವ ಮಳೆಯ ಕಾರಣದಿಂದ ಕಾಫಿ ಮಿಡಿಗಳ ಮಧ್ಯೆ ಚಿಗುರು ಬರುವದರೊಂದಿಗೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಮಾರಕ ಪರಿಣಾಮ ಬೀರಲಿದೆ. ಕಾಫಿ ಬೆಳೆಗಾರರ ಆಪತ್ಭಾಂದವ ಆಗಿರುವ ಕಾಳು ಮೆಣಸು ಬಳ್ಳಿಗಳಲ್ಲಿ ಚಿಗುರು ಮತ್ತು ಹೂ ಬರಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ದೂರವಾದರೆ ಬಿಸಿಲಿನ ಧಗೆಗೆ ಕಾಳುಮೆಣಸು ಹೂಗಳು ಉದುರುವ ಭೀತಿ ಮೂಡಿದೆ. ಒಟ್ಟಿನಲ್ಲಿ ಅಧಿಕ ಮಳೆಯೂ ಕೂಡ ಬೆಳೆಗಾರರ ಚಿತ್ತಕೆಡಿಸಿರುವದು ಕಂಡು ಬರುತ್ತಿದೆ.
ಅನಾವೃಷ್ಟಿ: ನಾಲಡಿ ಗ್ರಾಮ ಮಳೆಯ ತವರೂರು ಎಂದೇ ಖ್ಯಾತಿ ಪಡೆದಿದೆ. ಇಲ್ಲಿ ವಾರ್ಷಿಕ 200ರಿಂದ 300 ಇಂಚುಗಳಷ್ಟು ಮಳೆ ಸುರಿಯುತ್ತದೆ. ಮಳೆಗಾಲ ಎಂದರೆ ಇಲ್ಲಿನ ಜನಕ್ಕೆ ಏನೋ ಆತಂಕ. ಮಳೆಗಾಲ ಕಳೆದಂತೆ ಎಲ್ಲಾ ಫಸಲುಗಳು ನಾಶಗೊಂಡು ಗಿಡಗಳು ಬೋಳಾಗುವದು ಇಲ್ಲಿನ ಪ್ರತಿ ವರ್ಷದ ಚಿತ್ರಣ. ಆದರೆ ಈ ಬಾರಿ ಸರಿಯಾದ ಮಳೆಯಾಗದ ಹಿನ್ನೆಲೆಯಲ್ಲಿ ಕಾಫಿ ಹೂ ಅರಳದೆ ಕರಕಲಾಗಿ ಮುಂದಿನ ವರ್ಷದ ಫಸಲಿನ ಆಸೆಯನ್ನು ಬಿಡಬೇಕಾಗಿದೆ ಎನ್ನುತ್ತಾರೆ ಈ ವ್ಯಾಪ್ತಿಯ ಬೆಳೆಗಾರರು.