ಗೋಣಿಕೊಪ್ಪ ವರದಿ, ಏ. 29: ವೈದ್ಯ ಸೇವೆಯಲ್ಲಿ ಶೀಘ್ರವಾಗಿ ಫಲಿತಾಂಶ ಪಡೆಯುವ ಅವಕಾಶ ವಿರುವದರಿಂದ ವೈದ್ಯರಿಗೆ ಹೆಚ್ಚು ಸೇವೆ ನೀಡಲು ಪ್ರೋತ್ಸಾಹ ದೊರೆತಂತಾಗು ತ್ತದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜೀ ಅಭಿಪ್ರಾಯಪಟ್ಟರು.

ಅಲ್ಲಿನ ಪೊನ್ನಂಪೇಟೆ ರಾಮಕೃಷ್ಣ ಸೇವಾಶ್ರಮದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಹಾಗೂ ರಾಮಕೃಷ್ಣ ಸೇವಾಶ್ರಮ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಮಾಸಾಚರಣೆಯ ಪ್ರಯುಕ್ತ ಆಯೋಜಿಸಿದ್ದ ನುರಿತ ತಜ್ಞ ರಿಂದ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ವೈದ್ಯ ಸೇವೆಯಲ್ಲಿ ತಕ್ಷಣ ರೋಗ ಗುಣಪಡಿಸಲು ವೈದ್ಯರು ಚಿಕಿತ್ಸೆ

ನೀಡುವದರಿಂದ ಶೀಘ್ರವಾಗಿ ಪ್ರತಿಫಲ ಸಿಗುತ್ತದೆ. ಇದರಿಂದ ಹೆಚ್ಚು ಫಲಿತಾಂಶ ತಕ್ಷಣ ಸಿಗುವದರಿಂದ ಹೆಚ್ಚೆಚ್ಚು ಸಾಧಿಸಲು ಸಹಕಾರವಾಗು ತ್ತದೆ. ಇದನ್ನು ಅರಿತು ವೈದ್ಯರು ರೋಗಿಗಳಿಗೆ ನಿರಂತರ ಸೇವೆ ನೀಡುವ ಮೂಲಕ ಆರೋಗ್ಯ ಸೇವೆ ಯಲ್ಲಿ ಮುಂದುವರಿಯಬೇಕು ಎಂದರು.

ಈ ಸಂದರ್ಭ ಸೇವಾಶ್ರಮ ನಿರ್ದೇಶಕ ಪರಹಿತ ನಂದಾಜಿ, ರೋಟರಿ ಕ್ಲಬ್ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ, ಆಶ್ರಮ ವೈದ್ಯ ಡಾ. ಕಾರ್ಯಪ್ಪ, ಡಾ. ಮೋಹನ್ ಅಪ್ಪಾಜಿ ಪಾಲ್ಗೊಂಡಿದ್ದರು. ಕಣ್ಣು, ಕಿವಿ, ಮೂಗು, ದಂತ, ಜನರಲ್ ಮೆಡಿಸಿನ್ ಬಗ್ಗೆ ತಪಾಸಣೆ ನಡೆಸಲಾಯಿತು. ಜನರಲ್ ಸರ್ಜರಿ ಬಗ್ಗೆ ಸಲಹೆ ನೀಡಲಾಯಿತು. ವೈದ್ಯರುಗಳಾದ ಡಾ. ಸುಧಾಕರ್, ಡಾ. ಮೋಹನ್ ಅಪ್ಪಾಜಿ, ಡಾ. ಬೋಪಣ್ಣ, ಡಾ. ಪೊನ್ನಪ್ಪ, ಡಾ. ಲೋಕೇಶ್ ತಂಡದಿಂದ ತಪಾಸಣೆ ನಡೆಯಿತು. ಸುಮಾರು 100 ಮಂದಿ ತಪಾಸಣೆ ಮಾಡಿಸಿಕೊಂಡರು.