ವೀರಾಜಪೇಟೆ, ಏ. 28: ಬೊಳ್ಳಚಂಡ ಕುಟುಂಬದ ಯಾವದೇ ಮದುವೆಯಲ್ಲಿ ಗಂಗಾ ಪೂಜಾ ಸಂದರ್ಭ ಮದ್ಯ ಬಳಕೆಗೆ ನಿಷೇಧ ಹೇರುವಂತೆ ಬೊಳ್ಳಚಂಡ ಕುಟುಂಬದಲ್ಲಿ ತೀರ್ಮಾನಿಸಲಾಗಿದೆ ಎಂದು ಬೊಳ್ಳಚಂಡ ಕುಟುಂಬದ ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾ ಪೂಜಾ ಸಂದರ್ಭ ಮದ್ಯ ಬಳಕೆಯಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದೆ. ಮದ್ಯ ಸೇವಿಸಿದ ಸಂದರ್ಭ ಮನ ಬಂದಂತೆ ಕುಣಿಯುವದು ಮತ್ತಿತರ ಕೆಲವು ಸನ್ನಿವೇಶಗಳ ಬಗ್ಗೆ ಇದೀಗ ಜನವಲಯದಲ್ಲೂ ಚರ್ಚೆ ನಡೆಯುತ್ತಿದ್ದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬೊಳ್ಳಚಂಡ ಕುಟುಂಬದ ಕಾರ್ಯದರ್ಶಿ ಸುರೇಶ್, ಮರಣನಿಧಿ ಅಧ್ಯಕ್ಷ ತಮ್ಮಯ್ಯ, ಕಾರ್ಯದರ್ಶಿ ಅರಣ್ ಉಪಸ್ಥಿತರಿದ್ದರು.