ಶನಿವಾರಸಂತೆ, ಏ. 29: ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ ಅವರು ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಗ್ಗೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸ ಲಾಯಿತು.

ಈ ಸಂದರ್ಭ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ, ಉಪಾಧ್ಯಕ್ಷ ಹೆಚ್.ಪಿ. ಶೇಷಾದ್ರಿ, ಗೌರವ ಕಾರ್ಯದರ್ಶಿ ಕೆ.ಎಂ. ಜಗನ್‍ಪಾಲ್, ನಿರ್ದೇಶಕರುಗಳಾದ ಎನ್.ಕೆ. ಅಪ್ಪಸ್ವಾಮಿ, ಎನ್.ಬಿ. ನಾಗಪ್ಪ, ಬಿ.ಟಿ. ರಂಗಸ್ವಾಮಿ, ಮಹಮ್ಮದ್ ಗೌಸ್, ಪ್ರಾಂಶುಪಾಲರು ಗಳಾದ ಡಿ. ರವಿಕುಮಾರ್, ಈ.ಎಂ. ದಯಾನಂದ ಉಪಸ್ಥಿತರಿದ್ದರು.