ಮಡಿಕೇರಿ, ಏ. 29: ಮಡಿಕೇರಿಯ ನೃತ್ಯ ಸಂಸ್ಥೆಯಾಗಿರುವ ಕಿಂಗ್ಸ್ ಆಫ್ ಕೂರ್ಗ್‍ನಲ್ಲಿ ಅಂತರ್ರಾಷ್ಟ್ರೀಯ ನೃತ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಒಂದು ದಿನದ ನೃತ್ಯ ಶಿಬಿರ ಆಯೋಜಿ¸ Àಲಾಗಿತ್ತು, ಭರತನಾಟ್ಯ, ಕಂಟೆಪ್ರೋರಿ, ಹಿಪ್-ಹಾಪ್, ಸೆಮಿ ಕ್ಲಾಸಿಕಲ್ ನೃತ್ಯ ಪ್ರಾಕಾರದ ತರಬೇತಿ ನೀಡಲಾಯಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು, ಶಿಬಿರದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಎಲ್ಲ ವಿದ್ಯಾರ್ಥಿ ಗಳಿಂದ ಸಹಿ ಸಂಗ್ರಹಿಸಲಾಯಿತು. ಈ ವೇಳೆ ಕಿಂಗ್ಸ್ ಆಫ್ ಕೂರ್ಗ್‍ನ ನೃತ್ಯ ತರಬೇತುದಾರ ಮಹೇಶ್, ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.