ಸಿದ್ದಾಪುರ, ಏ. 27: ಕೊಡಗಿನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾಕೊಟಗಳು ಹೆಚ್ಚಿನ ಫಲಕಾರಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಅಂತರಾಷ್ಟ್ರೀಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ವ್ಯೆಕ್ತಪಡಿಸಿದರು.

ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಕರಡಿಗೊಡು ಕುಕ್ಕನೂರು ದಿವಂಗತ ಬಾಲಕೃಷ್ಣ ಹಾಗೂ ಚೇತನ್ ಸ್ಮರಣಾರ್ಥ ಮೈದಾನದಲ್ಲಿ ಕೊಡಗು ಚಾಂಪಿಯನ್ಸ್ ಲೀಗ್ 4 ಅವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯಲ್ಲಿ ಭಾಗವಹಿಸುವ ಯುವಕರು ಕ್ರೀಡಾ ಮನೋಭಾವನೆಯಿಂದ ಭಾಗಿಗಳಾಗಬೇಕು. ದೇಶವು ತನ್ನ ತಾಯಿ ಎಂಬ ಭಾವನೆ ಬರಬೇಕು. ಯುವ ಮಿತ್ರರು ದುರಾಭ್ಯಾಸಗಳನ್ನು ಬದಿಗಿಟ್ಟು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ದೈಹಿಕ ಅರೋಗ್ಯವನ್ನು ಸಮತೋಲನದಲ್ಲಿಡಲು ಸಾಧ್ಯವಾಗುತ್ತದೆ ಎಂದು ಕ್ರೀಡಾ ಪಟುಗಳಿಗೆ ಕಿವಿ ಮಾತು ಹೇಳಿದರು.

ಸಮಾಜ ಸೇವಕ ಸಂಕೇತ್ ಪೂವಯ್ಯ ಮಾತನಾಡಿ ಕ್ರೀಡೆಯನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯು ಕ್ರೀಡೆಯನ್ನು ಬೆಳೆಸುವಲ್ಲಿ ಶ್ರಮವಹಿಸುತ್ತಾನೆ ಅದರಂತೆ ಕ್ರೀಡಾಂಗಾಣವೇ ಇಲ್ಲದ ಭಾಗದಲ್ಲಿ ಕ್ರೀಡೆಯನ್ನು ಅಯೋಜಿಸುವ ನಿಟ್ಟಿನಲ್ಲಿ ಹೊಸತಾದ ಕ್ರೀಡಾಂಗಾಣ ನಿರ್ಮಾಣ ಮಾಡಿದ್ದು ಪ್ರಶಂಸನೀಯವೆಂದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಎ.ಅರ್. ಕುಟ್ಟಪ್ಪ ಮಾತನಾಡಿ, ಕ್ರೀಡಾಕೂಟದ ಅಯೋಜನೆಗೆ ಕೆಲವರಿಂದ ತಡೆ ಮತ್ತು ಬೆದರಿಕೆ ಬಂದರೂ ಎದೆಗುಂದದೆ ಒಂದು ತಿಂಗಳ ಕಾಲ ಸತತವಾಗಿ ದುಡಿದು ಕ್ರೀಡಾಂಗಾಣವನ್ನು ಸಿದ್ಧಪಡಿಸಿರುವ ಯುವಕರ ಶ್ರಮವು ಶ್ಲಾಘನೀಯವಾದುದು ಎಂದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಾಖಾ ಮಠ ಮೈಸೂರು ಪ್ರಧಾನ ಕಾರ್ಯದÀರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ತಮ್ಮ ಅರ್ಶೀವಚನದಲ್ಲಿ ಸಾಧನೆಗೆ ಗುರಿ ಮುಖ್ಯವಾಗಿದ್ದು, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಗುರಿಯನ್ನು ತಲುಪುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು. ಕೆ.ಸಿ.ಎಲ್. ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ವೇದಿಕೆಯಲ್ಲಿ ಶಕ್ತಿ ದಿನ ಪತ್ರಿಕೆಯ ಸಲಹ ಸಂಪಾದಕ ಬಿ.ಜಿ. ಅನಂತಶಯನ, ಸಿದ್ದಾಪುರ ನಗರ ಪತ್ರಕರ್ತ ಸಂಘದ ಅಧ್ಯಕ್ಷ ಎ.ಎನ್ ವಾಸು, ಕಾರ್ಮಿಕ ಮುಖಂq ಪಿ.ಆರ್. ಭರತ್, ವಕೀಲ ಟಿ.ಹೆಚ್. ಅಬೂಬಕರ್, ಮುಖ್ಯ ಪ್ರಯೋಜಕ ಉಮೇಶ್, ಪಿ.ಡಿ.ಒ. ವಿಶ್ವನಾಥ್, ದಾನಿಗಳಾದ ಎಂ. ಬಿಜೋಯ್, ಶಾಫಿ, ಪ್ರವಿಣ್, ಕಿಶೋರ್ ಕುಮಾರ್, ಡಾ.ಪಿ.ಸಿ. ಹಸೈನಾರ್, ವಕೀಲ ವೆಂಕಟೇಶ್ ಮತ್ತು ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ಕುಕ್ಕನೂರು ಪಿ. ಪುರುಷೋತ್ತಮ ಮತ್ತು ಕುಟುಂಬ, ಕುಕ್ಕನೂರು ದೇವಪ್ರಕಾಶ್ ಮತ್ತು ಕುಟುಂಬ, ಪ್ರೋ ಕಬ್ಬಡಿಗೆ ಅಯ್ಕೆಯಾದ ಅಟಗಾರ ಅವಿನಾಶ್ ಮತ್ತು ಅಂತರ್ರಾಷ್ಟೀಯ ಅಟಗಾರ ಅರ್ಜುನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.

ಸಿಟಿ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಮುಸ್ತಫ ಸ್ವಾಗತಿಸಿ, ಕ್ರೀಡಾ ಸಂಚಾಲಕ ಅಜೀಜ್ ನಿರೂಪಿಸಿ, ರೆಜಿತ್ ವಂದಿಸಿದರು,

ಪ್ರದರ್ಶನ ಪಂದ್ಯ ಕೆ.ಸಿ.ಎಲ್ ತಂಡ ಮತ್ತು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಡುವೆ ನಡೆದು ಪತ್ರಕರ್ತರ ಸಂಘವು ಜಯಶಾಲಿಯಾಗಿ ಹೊರಹೊಮ್ಮಿತು.