ಕಾಕೋಟುಪರಂಬು (ವೀರಾಜಪೇಟೆ), ಏ. 27: ಹಾಕಿ ಕೂರ್ಗ್ ವತಿಯಿಂದ ಕಾಕೋಟುಪರಂಬು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ನಂಬುಡುಮಾಡ, ಕುಪ್ಪಂಡ (ಕೈಕೇರಿ), ಚೋಟ್ಟೆರ, ಕಳ್ಳಿಚಂಡ, ಚಂದುರ, ಚೇಂದಿರ, ಕರ್ತಮಾಡ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಚೇಂದಿರ ಚೇತನ್ ಹ್ಯಾಟ್ರಿಕ್ ಸಾಧನೆ ಮಾಡಿದರು.

ನಂಬುಡುಮಾಡ ತಂಡ 4-0 ಗೋಲುಗಳಿಂದ ಪೊರ್ಕೋಂಡ ತಂಡವನ್ನು ಪರಾಭವಗೊಳಿಸಿತು. ನಂಬುಡುಮಾಡ ಪರ ಮಂದಣ್ಣ (8, 11ನಿ), ತಮ್ಮಯ್ಯ (18ನಿ), ಅಪ್ಪಣ್ಣ (19ನಿ)ದಲ್ಲಿ ಗೋಲು ದಾಖಲಿಸಿದರು.

ಕುಪ್ಪಂಡ (ಕೈಕೇರಿ), ತಂಡವು ಚೆನ್ನಪಂಡ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಕುಪ್ಪಂಡ ಪರ ಸೋಮಯ್ಯ (11,17ನಿ), ಚಂಗಪ್ಪ (19ನಿ), ಪ್ರಧಾನ್ (32ನಿ) ದಲ್ಲಿ ಗೋಲು ಬಾರಿಸಿದರು.

ಚೊಟ್ಟೆರ ತಂಡ 2-0 ಗೋಲುಗಳಿಂದ ಅಪ್ಪಂಡೆರಂಡ ತಂಡವನ್ನು ಸೋಲಿಸಿತು. ಚೊಟ್ಟೆರ ಪರ ನಿಶಾನ್ (27ನಿ), ಕವನ್ (32ನಿ)ದಲ್ಲಿ ಗೋಲು ಗಳಿಸಿದರು.

ಕಳ್ಳಿಚಂಡ ತಂಡ ಅಮ್ಮಂಡ ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ 1-1 ಗೋಲುಗಳ ಸಮಬಲ ಸಾಧಿಸಿತು. ಕಳ್ಳಿಚಂಡ ಕೌಶಿಕ್ (7ನಿ), ಟೈ ಬ್ರೇಕರ್‍ನಲ್ಲಿ ಶವನ್, ದರ್ಶನ್, ಅಮ್ಮಂಡ ಪೂವಣ್ಣ (31ನಿ) ಟೈ ಬ್ರೇಕರ್‍ನಲ್ಲಿ ಅಯ್ಯಪ್ಪ ಗೋಲು ದಾಖಲಿಸಿ ಗೋಲಿನ ಅಂತರವನ್ನು ಕಡಿಮೆ ಗೊಳಿಸಿದರು.

ಚಂದುರ ತಂಡ 2-0 ಗೋಲುಗಳಿಂದ ಐಚಂಡ ತಂಡವನ್ನು ಪರಾಭವ ಗೊಳಿಸಿತು. ಚಂದುರ ಪರ ಪೂವಣ್ಣ (13ನಿ), ಪಪ್ಪು ದೇವಯ್ಯ (23ನಿ) ದಲ್ಲಿ ಗೋಲು ಬಾರಿಸಿದರು.

ಚೇಂದಿರ ತಂಡ 3-0 ಗೋಲುಗಳಿಂದ ನೆರವಂಡ ತಂಡವನ್ನು ಮಣಿಸಿತು. ಚಂದುರ ತಂಡದ ಪರ ಚೇತನ್ (8, 29, 32ನಿ) ದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಕರ್ತಮಾಡ 3-0 ಗೋಲುಗಳಿಂದ ನಂಬುಡುಮಾಡ ತಂಡವನ್ನು ಪರಾಭವಗೊಳಿಸಿತು. ಕರ್ತಮಾಡ ತಂಡದ ಪರ ಚಂಗಪ್ಪ (15ನಿ), ಹರೀಶ್ (24ನಿ), ನಮನ್ (27ನಿ) ದಲ್ಲಿ ಗೋಲು ಬಾರಿಸಿ ಮುಂದಿನ ಸುತ್ತಿನ ಅರ್ಹತೆ ಪಡೆದು ಕೊಂಡರು.