ವೀರಾಜಪೇಟೆ, ಏ.25: ವೀರಾಜಪೇಟೆಯಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಂಡ್ ಕಲ್ಚರಲ್ ಅಸೋಸಿಯೇಶನ್ನ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ಸಮುದಾಯದ ಹಿರಿಯರು, ಉಪ ಖಜಾನೆಯ ನಿವೃತ್ತ ಅಧಿಕಾರಿ ಕೆ.ಎ.ಆಲಿ ಉದ್ಘಾಟಿಸಿದರು.
ಇಲ್ಲಿನ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾಟದ ಪ್ರಯುಕ್ತ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಆಲಿ ಅವರು ಸಮುದಾಯದ ಕುಟುಂಬಗಳ ನಡುವೆ ಪರಸ್ಪರ ಸೌಹಾರ್ದತೆಯ ಬೆಳವಣಿಗೆಗೆ ಸಮುದಾಯದ ಕ್ರೀಡೆಗಳು ಸಹಕಾರಿಯಾಗಲಿವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಪಿ.ಎ.ಹನೀಫ್ ಮಾತನಾಡಿ ಗ್ರಾಮಾಂತರ ಪ್ರದೇಶದ ತಾಲೂಕು ಕೇಂದ್ರದಲ್ಲಿ ಪಂದ್ಯಾಟ ಗಳನ್ನು ಆಯೋಜಿಸುವದರಿಂದ ಗ್ರಾಮಾಂತರ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅನುಕೂಲವಾಗಲಿದೆ ಎಂದರು.
ವೇದಿಕೆಯಲ್ಲಿ ಆಲೀರ ಉಮ್ಮರ್, ಉಬೈದುಲ್ಲಾ. ಆರ್.ಕೆ. ಅಬ್ದುಲ್ ಸಲಾಂ, ಎಂ.ಎ.ಹಂಸ, ಮನ್ಸೂರ್ ಆಲಿ, ನಾಸರ್ ಮಕ್ಕಿ, ಮಹಮ್ಮದ್ ಹಾಜಿ, ರಫೀಕ್. ಎ.ಸುಮನ್ ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ ಎಂ.ಎಂ.ಇಸ್ಮಾಯಿಲ್ ಹಾಗೂ ಪವಾಜ್ ನಿರೂಪಿಸಿದರು.