ಚೆಟ್ಟಳ್ಳಿ, ಏ. 25: ವೀರಾಜಪೇಟೆ ಸಮೀಪದ ಕಡಂಗದಲ್ಲಿ ಅರಫಾ ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಡೆಯುತ್ತಿರುವ 16ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಗುರುವಾರ ಆಶಸ್ ಗೋಣಿಕೊಪ್ಪ ತಂಡವು ಕೆ.ಎಂ ಫ್ರೆಂಡ್ಸ್ ಕಡಂಗ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ.
ಮೊದಲನೇ ಪಂದ್ಯಾಟವು ಕೆ.ಎಂ ಫ್ರೆಂಡ್ಸ್ ಕಡಂಗ ಹಾಗೂ ಆಶಸ್ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟ್ ಮಾಡಿದ ಗೋಣಿಕೊಪ್ಪ ತಂಡ ನಿಗದಿತ 4 ಓವರ್ಗಳಿಗೆ 37 ರನ್ ಗಳಿಸಿತು. ಕಡಂಗ ತಂಡ 9 ರನ್ಗಳ ಸೋಲು ಕಂಡಿತು.
ಎರಡನೇ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಓಸಿಸ್ ಹೊದವಾಡ ತಂಡವು 4 ಓವರ್ಗಳಿಗೆ 36 ರನ್ ಗಳಿಸತು. ಬಲಮುರಿ ತಂಡವು 6 ವಿಕೆಟ್ಗಳ ಗೆಲವು ಕಂಡಿತು.
ಮೂರನೇ ಪಂದ್ಯಾಟವು ಮಾಲ್ದಾರೆ ಹಾಗೂ ಪಡಿಯಾನಿ ತಂಡಗಳ ನಡುವೆ ನಡೆಯಿತು. ಮಾಲ್ದಾರೆ ತಂಡವು 6 ವಿಕೆಟ್ಗಳ ಗೆಲವು ಸಾಧಿಸಿ ಫ್ರೀ ಕ್ವಾರ್ಟರ್ಗೆ ಅರ್ಹತೆ ಪಡೆಯಿತು.
ನಾಲ್ಕನೇ ಪಂದ್ಯಾಟವು ತಾಜ್ ಫ್ರೆಂಡ್ಸ್ ಹಾಗೂ ಕೊಂಡಂಗೇರಿ ಫ್ರೆಂಡ್ಸ್ ತಂಡಗಳ ನಡುವೆ ನಡೆಯಿತು.
ಮೊದಲು ಬ್ಯಾಟ್ ಮಾಡಿದ ಕೊಂಡಂಗೇರಿ ತಂಡವು 4 ಓವರ್ಗೆ 47 ರನ್ಗಳಿಸಿತು.
ತಾಜ್ ಕ್ರಿಕೆಟರ್ಸ್ ತಂಡವು 5 ರನ್ಗಳ ಸೋಲು ಕಂಡಿತು.
ಐದನೇ ಪಂದ್ಯಾಟದಲ್ಲಿ ಲಿಮ್ರಾ ಮೇಕೇರಿ ತಂಡವು ಗೆಲವು ಸಾಧಿಸಿ ಫ್ರೀ ಕ್ವಾರ್ಟರ್ ಅರ್ಹತೆ ಪಡೆಯಿತು.
ಕೋಬ್ರಾ ವೀರಾಜಪೇಟೆ ಹಾಗೂ ಕುಂಜಿಲ ನಡುವಿನ ಪಂದ್ಯಾಟದಲ್ಲಿ ಕೋಬ್ರಾ ತಂಡವು 8 ರನ್ಗಳ ಗೆಲವು ಸಾಧಿಸಿ ಫ್ರೀ ಕ್ವಾರ್ಟರ್ಗೆ ಲಗ್ಗೆಯಿಟ್ಟಿತು.
ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ನಾಲ್ಕು ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ತಾಜ್ ಕ್ರಿಕೆಟರ್ಸ್ ತಂಡಕ್ಕೆ ಕೊಂಡಂಗೇರಿ ಫ್ರೆಂಡ್ಸ್ ತಂಡವು ಸೋಲುಣಿಸಿ ಕ್ರೀಡಾಪ್ರೇಮಿಗಳಿಗೆ ಅಚ್ಚರಿ ಫಲಿತಾಂಶ ನೀಡಿತು.ತಾಜ್ ಕ್ರಿಕೆಟರ್ಸ್ ತಂಡವು ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ 15ನೇ ವರ್ಷದ ಕೊಡಗು ಮುಸ್ಲಿಂ ಪಂದ್ಯಾಟದ ರನ್ನರ್ ಅಪ್ ತಂಡವಾಗಿದೆ.
-ಕೆ.ಎಂ. ಇಸ್ಮಾಯಿಲ್ ಕಂಡಕರೆ