ಕುಶಾಲನಗರ, ಏ. 25: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ರಾಮೋತ್ಸವದ ಅಂಗವಾಗಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ. ಉದಯಕುಮಾರ್ ಆರೋಗ್ಯವಂತ ಸಮಾಜಕ್ಕೆ ಮಹಿಳೆಯರ ಪಾತ್ರದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸ್ವಾದಿಷ್ಟ ಪೌಷ್ಟಿಕ ಆಹಾರ ಸಿದ್ಧತೆ ಮತ್ತು ಸೇವನೆಯ ಮಹತ್ವದ ಕುರಿತು ಮಾಹಿತಿ ಒದಗಿಸಿದರು. ಕಳೆದ 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದ ರಾಮೋತ್ಸವ, ಹನುಮಂತೋತ್ಸವ ಕಾರ್ಯಕ್ರಮದೊಂದಿಗೆ ಸಮಾರೋಪ ಕಂಡಿತು. ಬ್ರಾಹ್ಮಣರ ಸಂಘದ ಅಧ್ಯಕ್ಷ ಪಿ.ಎನ್. ವಿಜಯೇಂದ್ರ, ರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ರಾಜಶೇಖರ್, ಗಿರೀಶ್ ಮತ್ತು ಪದಾಧಿಕಾರಿಗಳು, ಸದಸ್ಯರು ಇದ್ದರು.