ಗೋಣಿಕೊಪ್ಪ ವರದಿ, ಎ. 25 : ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ನಡೆಯುತ್ತಿರುವ ಇಡೆಮಲೆಲಾತ್ಲೇರಂಡ ಕ್ರಿಕೆಟ್ ಟೂರ್ನಿಯಲ್ಲಿ ಶಶಿ ಫ್ರೆಂಡ್ಸ್ ಹಾಗೂ ನೋ ಸಿಕ್ಸ್ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆದಿವೆ.
ಶಶಿ ಫ್ರೆಂಡ್ಸ್ ತಂಡವು ನೊಕ್ಯ ಡಾಲ್ಫಿನ್ಸ್ ತಂಡವನ್ನು 1 ರನ್‍ಗಳ ಮೂಲಕ ಮಣಿಸಿ ಸೆಮಿಗೆ ಲಗ್ಗೆ ಇಟ್ಟಿತು. ಕ್ವಾರ್ಟರ್ ಫೈನಲ್‍ನಲ್ಲಿ ನೊಕ್ಯ ತಂಡದ ವಿರುದ್ಧ ಶಶಿ ತಂಡವು 28 ರನ್ ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ನೊಕ್ಯಾ ತಂಡವು 27 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ವಿರೋಚಿತ ಸೋಲು ಅನುಭವಿಸಿತು.
ಮತ್ತೊಂದು ಕ್ವಾರ್ಟರ್ ಫೈನಲ್‍ನಲ್ಲಿ ನೋಸಿಕ್ಸ್ ತಂಡವು ಕಾರೆಕಂಡಿ ತಂಡದ ವಿರುದ್ಧ 5 ರನ್‍ಗಳ ಗೆಲವು ದಾಖಲಿಸಿ ಸೆಮಿಗೆ ಪ್ರವೇಶ ಪಡೆದುಕೊಂಡಿತು. ನೋಸಿಕ್ಸ್ ತಂಡವು ಮೊದಲು ಬ್ಯಾಟ್ ಮಾಡಿ 52 ರನ್ ಗಳಿಸಿತು. ಬೆನ್ನತ್ತಿದ ಕಾರೆಕಂಡಿ ತಂಡವು 47 ರನ್‍ಗಳಿಸಲಷ್ಟೆ ಶಕ್ತವಾಯಿತು.
2ನೇ ಸುತ್ತಿನ ಪಂದ್ಯದಲ್ಲಿ ನೋಸಿಕ್ಸ್ ತಂಡವು ವೈಸಿಕ್ಸ್ ತಂಡವನ್ನು 6 ರನ್‍ಗಳಿಂದ ಮಣಿಸಿತು. ನೋಸಿಕ್ಸ್ ತಂಡವು 40 ರನ್ ಗಳಿಸಿತು, ವೈಸಿಕ್ಸ್ ತಂಡ ಕೇವಲ 36 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕಾರೆಕಂಡಿ ಎ ತಂಡವು ರಾಯಲ್ ಮೂಕ ತಂಡದ ವಿರುದ್ಧ 35 ರನ್‍ಗಳ ಗೆಲವು ಪಡೆಯಿತು. ಕರೆಕಂಡಿ 71 ರನ್ ದಾಖಲಿಸಿತು. ರಾಯಲ್ ಮೂಕ 36 ರನ್ ಗಳಿಸಿತು.
ಸಿದ್ದಾಪುರ ಲಯನ್ಸ್ ವಿರುದ್ಧ ರಾಯಲ್ ಮೂಕ ತಂಡವು 26 ರನ್‍ಗಳ ಗೆಲವು ಪಡೆಯಿತು. ರಾಯಲ್ ಮೂಕ 52 ರನ್ ದಾಖಲಿಸಿತು. ಸಿದ್ದಾಪುರ ಕೇಲವ 26 ರನ್ ಗಳಿಸಿತು.
ಕಾರೆಕಂಡಿ ಎ. ತಂಡವು ಸ್ಟಾರ್ ಇಲೆವೆಲ್ ವಿರುದ್ಧ 24 ರನ್‍ಗಳ ಜಯ ಪಡೆಯಿತು. ಕರೆಕಂಡಿ 67 ರನ್ ದಾಖಲಿಸಿತು. ಸ್ಟಾರ್ ತಂಡವು 43 ರನ್ ಗಳಿಸಿ ಸೋಲನುಭವಿಸಿತು.
ವೈ.ಬಿ. ಫ್ರೆಂಡ್ಸ್ ತಂಡವು ನಾಲಾಪಾಡಿ ತಂಡವನ್ನು 6 ರನ್‍ಗಳಿಂದ ಮಣಿಸಿತು. ವೈಬಿ ಫ್ರೆಂಡ್ಸ್ ಮೊದಲು ಬ್ಯಾಟ್ ಮಾಡಿ 38 ರನ್ ಗಳಿಸಿತು. ನಾಲಾಪಾಡಿ ತಂಡ 33 ರನ್ ದಾಖಲಿಸಿ ಸೋಲನುಭವಿಸಿತು.
ವಿಘ್ನೇಶ್ವರ ಫ್ರೆಂಡ್ಸ್ ತಂಡದ ವಿರುದ್ಧ ನೋಸಿಕ್ಸ್ ತಂಡವು 8 ರನ್‍ಗಳ ಜಯ ದಾಖಲಿಸಿತು. ನೋಫ್ರೆಂಡ್ಸ್ 53 ರನ್ ದಾಖಲಿಸಿತು. ವಿಘ್ನೇಶ್ವರ 46 ರನ್ ಪೇರಿಸಿ ಸೋಲಿಗೆ ಶರಣಾಯಿತು.
- ಸುದ್ದಿಪುತ್ರ