ನಾಪೆÇೀಕ್ಲು, ಏ. 25: ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್ ಇನ್ವಿಟೇಶನ್ ಕಪ್ ಚಾರಿಟಿ ಟೂರ್ನಮೆಂಟ್ ಪಂದ್ಯಾಟದಲ್ಲಿ ಕೆ.ವಿ ಮಡಿಕೇರಿ, ಅರೆಯಡ, ತಂಬುಕುತ್ತಿರ, ಮಂಡೇಪಂಡ ತಂಡಗಳು ಜಯಗಳಿಸಿ ಮುಂದಿನ ಸುತ್ತು ಪ್ರವೇಶಿಸಿವೆ.
ಕಕ್ಕಬ್ಬೆ ಮತ್ತು ಕೆ.ವಿ.ಮಡಿಕೇರಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆ.ವಿ.ಮಡಿಕೇರಿ ತಂಡವು ಕಕ್ಕಬ್ಬೆ ತಂಡವನ್ನು 2-1 ಗೋಲಿನ ಅಂತರದಿಂದ ಸೋಲಿಸಿತು. ಅಂಜಪರವಂಡ ಮತ್ತು ಅರೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಅರೆಯಡ ತಂಡವು ಅಂಜಪರವಂಡ ತಂಡವನ್ನು 3-2 ಗೋಲಿನಿಂದ ಮಣಿಸಿತು.ನ ಓಡಿಯಂಡ ಮತ್ತು ತಂಬುಕುತ್ತಿರ ತಂಡಗಳ ನಡುವಿನ ಪಂದ್ಯದಲ್ಲಿ ತಂಬುಕುತ್ತಿರ ತಂಡವು ಓಡಿಯಂಡ ತಂಡವನ್ನು 2-1 ಗೋಲಿನ ಅಂತರದಿಂದ ಮಣಿಸಿತು. ಓಡಿಯಂಡ ತಂಡದ ಪರ ವಿನ್ಸಿ ಪೆÇನ್ನಣ್ಣ ಒಂದು ಗೋಲು ದಾಖಲಿಸಿದರೆ, ತಂಬುಕುತ್ತಿರ ತಂಡದ ಪರ ಬೋಪಣ್ಣ ಎರಡು ಗೋಲು ದಾಖಲಿಸುವದರ ಮೂಲಕ ತಂಡದ ಗೆಲುವಿಗೆ ಪಾತ್ರರಾದರು. ಮಂಡೇಪಂಡ ಮತ್ತು ಕಾಂಡಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೇಪಂಡ ತಂಡವು ಕಾಂಡಂಡ ತಂಡವನ್ನು 6-2 ಗೋಲಿನಿಂದ ಮಣಿಸಿತು. ಕಾಂಡಂಡ ತಂಡದ ಪರ ಆಶಿಕ್, ಕಿರಣ್ ಮಾದಯ್ಯ ತಲಾ ಒಂದೊಂದು ಗೋಲು ದಾಖಲಿಸಿದರೆ, ಮಂಡೇಪಂಡ ತಂಡದ ಪರ ದಿಲನ್ ನಾಲ್ಕು, ಕವನ್, ಭುವನ್ ತಲಾ ಒಂದೊಂದು ಗೋಲು ದಾಖಲಿಸಿದರು.
ತಾಂತ್ರಿಕ ವಿಭಾಗ: ತಾಂತ್ರಿಕ ನಿರ್ದೇಶಕÀ ಬಡಕಡ ಸುರೇಶ್ ಬೆಳ್ಯಪ್ಪ, ವೀಕ್ಷಕ ವಿವರಣೆಗಾರರಾಗಿ ಕುಲ್ಲೇಟಿರ ಅರುಣ್ ಬೇಬ, ಮೂಡೇರ ಕಾಳಯ್ಯ, ಬಡಕಡ ದೀನಾ ಪೂವಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ವಾರಿಯರ್ಸ್ ಚಾಂಪಿಯನ್ ಲೀಗ್ ಪಂದ್ಯಾಟಕ್ಕೆ ವಿದ್ಯಾಶ್ರಮ ಎಜುಕೇಶನ್ ಫೌಂಡೇಶನ್ ಸಂಪೂರ್ಣ ಸಹಕಾರ ನೀಡುತ್ತಿದೆ.